ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ನಿರ್ಧರಿಸಿರುವ ಪುಣೆಯ ಪಾಲಿಕೆ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ‘ಸಂಜೀವನ್ ಉದ್ಯಾನ’ ಹೆಸರಿನ ನಗರ ಪ್ರದೇಶದಲ್ಲಿನ ಅರಣ್ಯ ಅಭಿವೃದ್ಧಿಗೆ ಮುಂದಾಗಿವೆ. ಇಂಥ ವಿಶಿಷ್ಟ ಮತ್ತು ದೇಶಾದ್ಯಂತ ಅಗತ್ಯ ಇರುವ ಕಾರ್ಯಕ್ಕೆ ಇತ್ತೀಚೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಚಾಲನೆ ನೀಡಿದ್ದಾರೆ.
ಒಟ್ಟು 32 ಎಕರೆಯಲ್ಲಿರುವ ನಗರ ಅರಣ್ಯದಲ್ಲಿ ಹೆಚ್ಚೆಚ್ಚು ವೈದ್ಯಕೀಯ ಬಳಕೆ ಸಸಿಗಳು, ಅಪಾರ ಪ್ರಮಾಣದಲ್ಲಿ ಆಮ್ಲಜನಕ ಹೊರಸೂಸುವ ಮರಗಳನ್ನು ನೆಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅರ್ಬನ್ ಅರಣ್ಯವು ಆಮ್ಲಜನಕ ಪಾರ್ಕ್ ಎಂದು ಕರೆಸಿಕೊಳ್ಳಲಿದೆ ಎನ್ನುವುದು ಕಾರ್ಪೊರೇಟರ್ ದೀಪಾಲಿ ಧುಮಾಲ್ ಅವರ ವಿಶ್ವಾಸವಾಗಿದೆ.
‘ಅರೆಸ್ಟ್ ಸ್ವರಾ ಭಾಸ್ಕರ್’ ಅಭಿಯಾನಕ್ಕೆ ಕೆಂಡಾಮಂಡಲಗೊಂಡ ನಟಿ
ಇದಕ್ಕೂ ಮುನ್ನ ಪುಣೆಯ ಎನ್‍ಐಬಿಎಂ ಪ್ರದೇಶದಲ್ಲಿ 30 ಎಕರೆಗಳಲ್ಲಿ ‘ಆನಂದ್ ವನ’ ಹೆಸರಿನ ನಗರಭಾಗದ ಅರಣ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು, ಕಾರ್ಪೊರೇಟ್ ಕಂಪನಿಗಳು, ಪರಿಸರ ಪ್ರೇಮಿಗಳು ಆರ್ಥಿಕ ನೆರವು ಮತ್ತು ಶ್ರಮದಾನ ನೀಡಿದ್ದಾರೆ.