ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2025 ಪಂದ್ಯದ ಮೊದಲು, ಸಂಜಯ್ ಮಾಂಜ್ರೇಕರ್ ಟಾಸ್ ಪ್ರಸ್ತುತಿಗಳ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ರವಿ ಶಾಸ್ತ್ರಿ ಟಾಸ್ ಸಮಯದಲ್ಲಿ ‘ತುಂಬಾ ಗದ್ದಲ’ ಮಾಡುತ್ತಾರೆ ಎಂದು ಪರೋಕ್ಷವಾಗಿ ಟೀಕಿಸಿದ ಮಾಂಜ್ರೇಕರ್, ಇಯಾನ್ ಬಿಷಪ್ ಅವರ ಸಮತೋಲಿತ ವಿಧಾನವನ್ನು ಹೊಗಳಿದ್ದಾರೆ. ರವಿ ಶಾಸ್ತ್ರಿ ನಾಣ್ಯ ಚಿಮ್ಮುವ ಸಂದರ್ಭದಲ್ಲಿ ಮಾಡುವ ವಿಶ್ಲೇಷಣೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಆಕರ್ಷಕ ನಿರೂಪಣೆಯು ಅಭಿಮಾನಿಗಳಿಗೆ ಉತ್ಸಾಹವನ್ನು ನೀಡುತ್ತದೆ. ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಶಾಸ್ತ್ರಿ ಕೆಲವು ಟಾಸ್‌ಗಳನ್ನು ನಿರೂಪಿಸಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ವೇಳೆ ಟಾಸ್‌ನಲ್ಲಿ ಕಾಣಿಸಿಕೊಂಡಿದ್ದರು.
ಶನಿವಾರ ಮಾರ್ಚ್ 29 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೊದಲು ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಮಾತನಾಡಿದ ಮಾಂಜ್ರೇಕರ್, ಇಯಾನ್ ಬಿಷಪ್ ಶೈಲಿಯು ನಾಯಕನ ಮನಸ್ಥಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ವ್ಯಾಖ್ಯಾನಕಾರರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. “ಇಯಾನ್ ಬಿಷಪ್‌ನಿಂದ ನಿಮಗೆ ಸಿಗುವುದು ಅದೇ” ಎಂದು ಮಾಂಜ್ರೇಕರ್ ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಹೇಳಿದ್ದಾರೆ.
ಸಂಜಯ್ ಮಾಂಜ್ರೇಕರ್ ನೇರವಾಗಿ ರವಿ ಶಾಸ್ತ್ರಿ ಅವರನ್ನು ಉಲ್ಲೇಖಿಸದಿದ್ದರೂ, ಆದರೆ ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಗಮನವನ್ನು ಸೆಳೆಯಿತು. ಹಲವರು ಅವರು ಭಾರತದ ಮಾಜಿ ಮುಖ್ಯ ಕೋಚ್ ಅನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಊಹಿಸಿದ್ದಾರೆ.