‘ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ‘ಹೀರಮಂಡಿ’ ವೆಬ್ ಸರಣಿಯ ಟ್ರೈಲರ್ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.
ಹೀರಮಂಡಿ ಟ್ರೇಲರ್ ಗೆ ನಟಿ ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಮಂಡಿ, ಲಾಹೋರ್ ನ ವೇಶ್ಯೆಯರ ಕಥೆಗಳಿಗೆ ಜೀವ ತುಂಬುತ್ತದೆ ಮತ್ತು ಅವರ ಜೀವನದ ಕಡಿಮೆ ತಿಳಿದಿರುವ ಅಂಶಗಳನ್ನು ಅನ್ವೇಷಿಸುತ್ತದೆ.
ಈ ಸರಣಿಯಲ್ಲಿ ಮನೀಷಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಶರ್ಮಿನ್ ಸೆಗಲ್ ಮತ್ತು ಸಂಜೀದಾ ಶೇಖ್ ನಟಿಸಲಿದ್ದಾರೆ. ಈ ಸರಣಿಯು ಮೇ 1 ರಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.