
ಯುಎಇಯಲ್ಲಿ ಟಿ-20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಅಕ್ಟೋಬರ್ 24ರಂದು ಭಾರತ-ಪಾಕಿಸ್ತಾನದ ಮಧ್ಯೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಆಟಗಾರರು ಸಿದ್ಧತೆ ನಡೆಸುತ್ತಿದ್ದಾರೆ.
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪ್ರಸ್ತುತ ತಂಡದಲ್ಲಿದ್ದು, ಅವರ ಪತ್ನಿ ಸಂಜನಾ ಗಣೇಶನ್ ಕೂಡ ಯುಎಇಯಲ್ಲಿದ್ದಾರೆ. ಸಂಜನಾ ಮತ್ತೊಮ್ಮೆ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಜನಾ ಗಣೇಶನ್ ಟಿವಿ ನಿರೂಪಕಿ. ಕ್ರಿಕೆಟ್ ಸೇರಿದಂತೆ ಅನೇಕ ಕ್ರೀಡಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಟಿವಿ ಸಂದರ್ಶನ, ಆಟಗಾರರ ವಿಶೇಷ ಸಂದರ್ಶನ ಸೇರಿದಂತೆ ವಿಷಯ ತಜ್ಞರ ಜೊತೆ ಮಾತುಕತೆ ನಡೆಸುತ್ತಾರೆ.
ಸಂಜನಾ ಹಾಗೂ ಬುಮ್ರಾ ಮದುವೆ ನಂತ್ರ ಸಂಜನಾ ಬ್ರೇಕ್ ತೆಗೆದುಕೊಂಡಿದ್ದರು. ಅವರು ಸ್ಟುಡಿಯೋದಲ್ಲಿ ಕಾಣಿಸಿಕೊಂಡಿರಲಿಲ್ಲ. ಬುಮ್ರಾ ಜೊತೆ ಅವರು ಪ್ರವಾಸ ಕೈಗೊಂಡಿದ್ದರು. ಇಂಗ್ಲೆಂಡ್ ನಲ್ಲಿ ನಟಿ ಅನುಷ್ಕಾ ಸೇರಿದಂತೆ ಆಟಗಾರರ ಪತ್ನಿಯರ ಜೊತೆ ಸಂಜನಾ ಕೂಡ ಕಾಣಿಸಿಕೊಂಡಿದ್ದು, ಅವರ ಫೋಟೋ ವೈರಲ್ ಆಗಿತ್ತು.
ಬುಮ್ರಾ ಹಾಗೂ ಸಂಜನಾ, ಮಾರ್ಚ್ 15,2021 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಸಂಜನಾ, Splitsvilla ಶೋನಲ್ಲೂ ಕಾಣಿಸಿಕೊಂಡಿದ್ದರು.