alex Certify ಸರ್ಕಾರಿ ಶಾಲೆಯಲ್ಲಿ ಬಾಲಕರಿಗೂ ನ್ಯಾಪ್ಕಿನ್: ಬಯಲಾಯ್ತು ಮುಖ್ಯ ಶಿಕ್ಷಕನ ಕರಾಮತ್ತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಶಾಲೆಯಲ್ಲಿ ಬಾಲಕರಿಗೂ ನ್ಯಾಪ್ಕಿನ್: ಬಯಲಾಯ್ತು ಮುಖ್ಯ ಶಿಕ್ಷಕನ ಕರಾಮತ್ತು..!

ಪಾಟ್ನಾ: ಬಿಹಾರದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಯೋಜನೆಯನ್ನು 2015 ರಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ. ಆದರೆ, ಈ ಯೋಜನೆಯಡಿ ಬಾಲಕಿಯರಿಗೆ ಮಾತ್ರವಲ್ಲದೇ ಸರ್ಕಾರಿ ಶಾಲೆಯೊಂದರ ಬಾಲಕರಿಗೂ ಕೂಡ ನ್ಯಾಪ್ಕಿನ್ ನೀಡಿರುವುದಾಗಿ ಶಾಲೆಯ ಮುಖ್ಯಶಿಕ್ಷಕ ವರದಿ ಸಲ್ಲಿಸಿದ್ದಾರೆ.

ಬಿಹಾರದ ಸರನ್ ಜಿಲ್ಲೆಯ ಮಾಂಝಿ ಬ್ಲಾಕ್ ವ್ಯಾಪ್ತಿಯ ತಾಳ್ಕೋರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಈ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಶಿಕ್ಷಕ ಸಲ್ಲಿಸಿದ ವರದಿಯಲ್ಲಿ ಲೋಪ ಕಂಡುಬಂದಿದೆ. 2016- 17 ರಲ್ಲಿ 7 ಮಂದಿ ಬಾಲಕರಿಗೆ ನ್ಯಾಪ್ಕಿನ್ ಖರೀದಿಗೆ 150 ರೂಪಾಯಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಯೋಜನೆಯಲ್ಲಿ ಶಿಕ್ಷಣ ಹಣ ದುರ್ಬಳಕೆ ಮಾಡಿಕೊಂಡಿದ್ದು, ಪ್ರಕರಣದ ತನಿಖೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...