
ನಟಿ ಸಂಗೀತ ಶೃಂಗೇರಿ ದಿನಕ್ಕೊಂದು ಫೋಟೋ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸಂಗೀತ ಶೃಂಗೇರಿ ತಮ್ಮ ಸಿನಿಮಾ ಮಾತ್ರವಲ್ಲದೆ ಫೋಟೋಶೂಟ್ ನಲ್ಲೂ ಸಾಕಷ್ಟು ಬಿಜಿಯಾಗಿರುತ್ತಾರೆ.
ಇತ್ತೀಚಿಗೆ ಫೋಟೋಶೂಟ್ ಮಾಡಿಸಿದ್ದು, ಒಂದೊಂದಾಗಿ ತಮ್ಮ instagram ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜಿಮ್ ನಲ್ಲಿ ತಮ್ಮ ಫಿಟ್ನೆಸ್ ಫೋಟೋಶೂಟ್ ಮಾಡಿಸಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆ ಬಂದಿದೆ.
2016 ರಲ್ಲಿ ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಸತಿ ದಾಕ್ಷಾಯಿಣಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸಂಗೀತ ಶೃಂಗೇರಿ 2018ರಲ್ಲಿ ತೆರೆಕಂಡ A+ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು. 777 ಚಾರ್ಲಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸಂಗೀತ ಇತ್ತೀಚಿಗೆ ‘ಮಾರಿ ಗೋಲ್ಡ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


