ಬೆಂಗಳೂರು : ಕರ್ನಾಟಕ ಬಂದ್ ಗೆ ‘ಸ್ಯಾಂಡಲ್ವುಡ್ ಸಾಥ್’ ನೀಡಿದ್ದು, ಫಿಲ್ಮ್ ಚೇಂಬರ್ ಎದುರು ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಧರಣಿ ಆರಂಭವಾಗಿದೆ.
ಫಿಲ್ಮ್ ಚೇಂಬರ್ ಮುಂದೆ ನಟರಾದ ಶಿವರಾಜ್ ಕುಮಾರ್, ದ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ ಹಲವು ನಟ ಮತ್ತು ನಟಿಯರು ಪ್ರತಿಭಟನೆ ನಡೆಸಲಿದ್ದಾರೆ. ಈಗಾಗಲೇ ಸ್ಥಳದಲ್ಲಿ ಹಿರಿಯ ನಟ ಶ್ರೀನಾಥ್, ಶ್ರೀನಿವಾಸ್ ಮೂರ್ತಿ, ಪದ್ಮಾ ವಾಸಂತಿ, ನಟಿ ಪೂಜಾ ಗಾಂಧಿ, ಉಮಾಶ್ರೀ, ಶೃತಿ,ಅನಿರುದ್ದ, ಚಿಕ್ಕಣ್ಣ ಸೇರಿದಂತೆ ಅನೇಕ ನಟ ನಟಿಯರು , ನಿರ್ಮಾಪಕರು, ನಿರ್ದೇಶಕರು ಭಾಗಿಯಾಗಿದ್ದಾರೆ . ಫಿಲ್ಮ್ ಚೇಂಬರ್ ಮುಂದೆ ಸಂಜೆ 6 ಗಂಟೆವರೆಗೆ ಮೌನ ಪ್ರತಿಭಟನೆ ನಡೆಸಲಿದ್ದಾರೆ.
ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ರಾಜ್ಯದ ಹಲವು ಕಡೆ ಪ್ರತಿಭಟನೆ ಕಾವು ಜೋರಾಗಿದೆ.