ಯಾದಗಿರಿ: ಅರಣ್ಯ ಇಲಾಖೆ ಕಚೇರಿಯಲ್ಲೇ ಶ್ರೀಗಂಧ ಕಳವು ಮಾಡಿದ್ದ ಶಿವಮೊಗ್ಗ ಜಿಲ್ಲೆಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿಯ ಅರಣ್ಯ ಇಲಾಖೆ ಪ್ರಾದೇಶಿಕ ವಲಯ ಕಚೇರಿಯಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಕಳವು ಮಾಡಿದ ಶಿವಮೊಗ್ಗದ ಸೂಳೆಬೈಲ್ ನಿವಾಸಿ ಬಾಬಾಜಾನ್ ಮೌಲಾಸಾಬ್ ಮತ್ತು ಶಿಕಾರಿಪುರದ ಪಾಲಾಕ್ಷಪ್ಪ ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ 2.87 ಲಕ್ಷ ರೂ. ಮೌಲ್ಯದ 40 ಕೆಜಿ ಶ್ರೀಗಂಧದ ತುಂಡುಗಳು, ಕೃತ್ಯಕ್ಕೆ ಬಳಸಿದ ಇನೋವಾ ಕಾರ್ ವಶಕ್ಕೆ ಪಡೆಯಲಾಗಿದೆ.
ಕಚೇರಿಯಲ್ಲಿದ್ದ ಶ್ರೀಗಂಧ ಕಟ್ಟಿಗೆಗಳ ಕಲವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಇಬ್ಬರನ್ನು ಅಮಾನತು ಮಾಡಲಾಗಿತ್ತು. ಅ. 1 ಮತ್ತು 3ರಂದು ಕಚೇರಿಯ ಹಿಂಬದಿಯಲ್ಲಿದ್ದ ಕಿಟಕಿಯ ಗ್ರಿಲ್ ಮುರಿದು ಜಪ್ತಿ ಜ್ಯೋತಿ ಮಾಡಿ ಇಡಲಾಗಿದ್ದ 6.16 ಲಕ್ಷ ರೂ. ಮೌಲ್ಯದ 88 ಕೆಜಿ ಶ್ರೀಗಂಧ ಕಟ್ಟಿಗೆಗಳು ಕಳುವಾಗಿದ್ದವು. ಈ ಕುರಿತು ಅರಣ್ಯಾಧಿಕಾರಿ ಎಂ. ಲಕ್ಷ್ಮಣ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.