
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಮೀಸಲು ಅರಣ್ಯದಲ್ಲಿ ಗಂಧದ ಮರ ಕಡಿಯುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ.
ಸೆಲ್ವಿ ಮತ್ತು ಬಾಲಕೃಷ್ಣ ಬಂಧಿತ ದಂಪತಿ ಎಂದು ಹೇಳಲಾಗಿದೆ. ಕಾಡಿನಲ್ಲಿ ಗಂಧದ ಮರ ಕಡಿಯುವಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಸೆಲ್ವಿ ಹಾಗೂ ಬಾಲಕೃಷ್ಣ ಕಾಡಿನಲ್ಲಿ ಗಂಧದ ಮರ ಕಡಿಯುವಾಗ ದಾಳಿ ಮಾಡಿದ್ದು, 6 ಕೆಜಿ ಗಂಧದ ತುಂಡು, 4 ಕೆಜಿ ಗಂಧದ ಚಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಅರಣ್ಯ ಇಲಾಖೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.