ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಮುಂಬರುವ ಫೋಲ್ಡಬಲ್ ಫೋನ್‌ಗಳ ಬೆಲೆಯನ್ನು ಕಡಿತಗೊಳಿಸಲು ಉದ್ದೇಶಿಸಿದೆ.
ಸ್ಯಾಮ್‌ಸಂಗ್ ಮಡಚಬಹುದಾದ ಸ್ಮಾರ್ಟ್ ಫೋನ್ ಗಳಲ್ಲಿ ಚೈನಾ ಬ್ಯಾಟರಿ ತಯಾರಕ ಆಂಪೆರೆಕ್ಸ್ ಟೆಕ್ನಾಲಜಿ ಲಿಮಿಟೆಡ್ ಬ್ಯಾಟರಿ ಬಳಕೆಗೆ ಮುಂದಾಗಿದೆ. ಇನ್ನೊಂದು ಸಂಗತಿ ಎಂದರೆ ಸ್ಯಾಮ್‌ಸಂಗ್ ಗೆಲಾಕ್ಸಿ ಎಂ53 5ಜಿ ಜೊತೆಗೆ 108 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಮೊಬೈಲ್ ಉತ್ಪಾದನೆಯ ಘಟಕ ಭಾರತದಲ್ಲಿ ಪ್ರಾರಂಭವಾಗಿದೆ.
BIG NEWS: ಹನುಮ ಜನ್ಮಭೂಮಿ ಅಂಜನಾದ್ರಿ ಮೇಲೆ ಕಾಂಗ್ರೆಸ್ ಕಣ್ಣು; ಬಿಜೆಪಿ ಬಳಿಕ ಕಾಂಗ್ರೆಸ್ ನಿಂದಲೂ ಭಜರಂಗಿ ಜಪ
ಸ್ಯಾಮ್‌ಸಂಗ್ ಬೆಲೆಯನ್ನು ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ಇದ್ದು, ವೆಚ್ಚವನ್ನು ಉಳಿಸಲು ಕಂಪನಿಯು ಎಟಿಎಲ್ ಬ್ಯಾಟರಿ ಬಳಸಲಿದೆ ಎಂದು ಹೇಳಲಾಗುತ್ತಿದ್ದು, ವರದಿಯ ಪ್ರಕಾರ ಬ್ಯಾಟರಿಗಳು ಒಟ್ಟು ಮೊಬೈಲ್ ವೆಚ್ಚದ ಸುಮಾರು 5 ಪ್ರತಿಶತವನ್ನು ಹೊಂದಿವೆ.
ಗೆಲಾಕ್ಸಿ ನೋಟ್ 7 ಫೋನ್‌ಗಳು ಬೆಂಕಿ ಹತ್ತಿಕೊಂಡ ವಿವಾದದ ನಂತರ 2017 ರಲ್ಲಿ ಎಟಿಎಲ್ ಸ್ಯಾಮ್‌ಸಂಗ್ ನಿಂದ ದೂರವಾಗಿತ್ತು. ದೋಷಪೂರಿತ ಬ್ಯಾಟರಿಗಳು ಮೊಬೈಲ್ ಮಾರಾಟ ಹಿನ್ನೆಡೆಗೆ ಕಾರಣ ಎಂದು ಆಪಾದಿಸಿತ್ತು. ಇದೀಗ ಚೈನಾದ ಆ ಬ್ಯಾಟರಿ ತಯಾರಕರು ಪೂರೈಕೆಯನ್ನು ಪುನರಾರಂಭಿಸಿದ್ದಾರೆ.