ಐಐಟಿ ಹಾಗೂ ಬಿಟ್ಸ್‌ನಂಥ ದೇಶದ ಅಗ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ 1,000ಕ್ಕೂ ಹೆಚ್ಚಿನ ತಂತ್ರಜ್ಞರನ್ನು ಹೈರ್ ಮಾಡಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ನಿರ್ಮಿಸಲು ಸ್ಯಾಮ್ಸಂಗ್ ಇಂಡಿಯಾ ಸನ್ನದ್ಧವಾಗಿದೆ.
ಭಾರತ ಹಾಗೂ ಜಾಗತಿಕ ಮಾರುಕಟ್ಟೆಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಸೃಷ್ಟಿಸಲಾಗುತ್ತಿರುವ ಈ ಆರ್&ಡಿ ಪರಿಸರದಲ್ಲಿ ಸೇರಿಕೊಳ್ಳಲಿರುವ ನವ ತಂತ್ರಜ್ಞರು ಕೃತಕ ಬುದ್ಧಿಮತ್ತೆ (ಎಐ), ಅಂತರ್ಜಾಲಾಧರಿತ ವಸ್ತುಗಳು (ಐಒಟಿ), ಯಂತ್ರ ಕಲಿಕೆ (ಎಂಎಲ್), ಆಳವಾದ ಕಲಿಕೆ, ಜಲಗಳು ಹಾಗೂ ಚಿತ್ರಗಳ ಸಂಸ್ಕರಣೆಯಂಥ ಅನೇಕ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಅಧ್ಯಯನ ನಡೆಸಲಿದ್ದಾರೆ.
ಬೆಂಗಳೂರು, ದೆಹಲಿ ಹಾಗು ನೋಯಿಡಾದಲ್ಲಿ ಸ್ಯಾಮ್ಸಂಗ್ ಆರ್&ಡಿ ಕೇಂದ್ರಗಳನ್ನು ಹೊಂದಿದೆ.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ಶಾಕ್: ಶಿಕ್ಷಕರ ವರ್ಗಾವಣೆ ಮುಂದೂಡಿಕೆ
“ಸದ್ಯ ನಮ್ಮಲ್ಲಿ 9,000-10,000 ತಂತ್ರಜ್ಞರು ಇದ್ದು, ನಮ್ಮ ಮೂರು ಆರ್&ಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಐಐಟಿಗಳು ಹಾಗೂ ಇತರೆ ಅಗ್ರ ಸಂಸ್ಥೆಗಳಿಂದ 1000 ಪ್ಲಸ್ ತಂತ್ರಜ್ಞರನ್ನು ಹೈರ್ ಮಾಡಲು ನಾವು ಇಚ್ಛಿಸುತ್ತೇವೆ,” ಎಂದು ಸ್ಯಾಮ್ಸಂಗ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಮೀರ್ ವಾಧವನ್ ತಿಳಿಸಿದ್ದಾರೆ.
ಭಾರತದಲ್ಲಿ ತನ್ನ ಮೊದಲ ಆರ್ ಆ್ಯಂಡ್ ಡಿ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಿರುವ ಸ್ಯಾಮ್ಸಂಗ್, ದಕ್ಷಿಣ ಕೊರಿಯಾದ ಹೊರಗೆ ಅತ್ಯಂತ ದೊಡ್ಡ ಆರ್&ಡಿ ವ್ಯವಸ್ಥೆಗಳನ್ನು ನಮ್ಮ ದೇಶದಲ್ಲಿ ಹೊಂದಿದೆ.
ದಕ್ಷಿಣ ಕೊರಿಯಾದ ಈ ದಿಗ್ಗಜ ಸಂಸ್ಥೆಯು 2020ರಲ್ಲಿ ದೇಶದ ಅಗ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ 1,200ಕ್ಕೂ ಹೆಚ್ಚಿನ ಇಂಜಿನಿಯರ್‌ಗಳನ್ನು ಹೈರ್ ಮಾಡಿತ್ತು.