ಭಾರತದಾದ್ಯಂತ ತನ್ನ ವಿವಿಧ ಸಂಸ್ಥೆಗಳಿಗೆ ಸುಮಾರು 1,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಸ್ಯಾಮ್‌ಸಂಗ್ ಇಂಡಿಯಾ ಯೋಜಿಸಿದೆ. ಬೆಂಗಳೂರು, ನೋಯ್ಡಾ, ದೆಹಲಿಯ ಹಲವು ಶಾಖೆಗಳಿಗೆ ಈ ನೇಮಕಾತಿ ನಡೆಯಲಿದೆ.
ಇದರ ಭಾಗವಾಗಿ ಸ್ಯಾಮ್‌ಸಂಗ್ ಆರ್ & ಡಿ ಕೇಂದ್ರಗಳು ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಹೈದರಾಬಾದ್, ಐಐಟಿ ಬಾಂಬೆ, ಐಐಟಿ ರೂರ್ಕಿ, ಐಐಟಿ ಖರಗ್‌ಪುರ, ಐಐಟಿ ಕಾನ್ಪುರ, ಐಐಟಿ ಗುವಾಹಟಿ ಮತ್ತು ಐಐಟಿ ಬಿಎಚ್‌ಯು ಮುಂತಾದ ಉನ್ನತ ಐಐಟಿಗಳಿಂದ ಸುಮಾರು 200 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುತ್ತದೆ.
ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ಶಾಖೆಗಳು (AI/ML/ಕಂಪ್ಯೂಟರ್ ವಿಷನ್/VLSI ಇತ್ಯಾದಿ), ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಇನ್‌ಸ್ಟ್ರುಮೆಂಟೇಶನ್, ಎಂಬೆಡೆಡ್ ಸಿಸ್ಟಮ್ಸ್ ಮತ್ತು ಕಮ್ಯುನಿಕೇಷನ್ ನೆಟ್‌ವರ್ಕ್‌ಗಳು, ಗಣಿತ ಮತ್ತು ಕಂಪ್ಯೂಟಿಂಗ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಂತಹ ಹಲವಾರು ಸ್ಟ್ರೀಮ್‌ಗಳಲ್ಲಿ ನೇಮಕಾತಿಯನ್ನು ಮಾಡಲಾಗುತ್ತದೆ.
ಹೊಸ ನೇಮಕಾತಿಗಳು 2023 ರಿಂದ ಆರಂಭವಾಗಲಿದೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಆಳವಾದ ಕಲಿಕೆ, ಇಮೇಜ್ ಪ್ರೊಸೆಸಿಂಗ್, IoT, ಕನೆಕ್ಟಿವಿಟಿ, ಕ್ಲೌಡ್, ಬಿಗ್ ಡೇಟಾ, ಬಿಸಿನೆಸ್ ಇಂಟೆಲಿಜೆನ್ಸ್, ಪ್ರಿಡಿಕ್ಟಿವ್ ಅನಾಲಿಸಿಸ್ ಮುಂತಾದ ಹಲವಾರು ಹೊಸ-ಯುಗದ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿಸಲಾಗಿದೆ.