
ಅತ್ಯಂತ ಕೈಗೆಟುಕುವ ದರದ ಗ್ಯಾಲಕ್ಸಿ ಎ ಸರಣಿಯ 5ಜಿ ಸ್ಮಾರ್ಟ್‌ಫೋನ್ ಆಗಿರುವ ಗ್ಯಾಲಕ್ಸಿ ಎ06 5ಜಿ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರಿಗೆ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದೀರ್ಘ ಬಾಳಿಕೆ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇಂದಿನಿಂದ, ಗ್ಯಾಲಕ್ಸಿ ಎ06 5ಜಿ ಸ್ಮಾರ್ಟ್ ಫೋನ್ ಭಾರತದ ಎಲ್ಲಾ ರಿಟೇಲ್ ಮಳಿಗೆಗಳು, ಸ್ಯಾಮ್ ಸಂಗ್ ಎಕ್ಸ್ ಕ್ಲೂಸಿವ್ ಮಳಿಗೆಗಳು ಮತ್ತು ಇತರ ಆಫ್ ಲೈನ್ ಮಳಿಗೆಗಳಲ್ಲಿ ಬಹು ಸ್ಟೋರೇಜ್ ವೇರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ.
4 ಜಿಬಿ ರಾಮ್ ಇರುವ, 64 ಜಿಬಿ ಸ್ಟೋರೇಜ್ ಸಾಮರ್ಥ್ಯವಿರುವ ವೇರಿಯೆಂಟ್ ನ ಬೆಲೆ ರೂ. 10499 ಆಗಿದ್ದು, ಇದು ಈ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ ಆಗಿದೆ. ಗ್ಯಾಲಕ್ಸಿ ಎ06 5ಜಿ ಬ್ಲಾಕ್, ಗ್ರೇ ಮತ್ತು ಲೈಟ್ ಗ್ರೀನ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತದೆ. ಗ್ರಾಹಕರು ಸ್ಯಾಮ್‌ಸಂಗ್ ಕೇರ್ + ಪ್ಯಾಕೇಜ್ ಮೂಲಕ ಕೇವಲ ರೂ. 129 ನೀಡುವ ಮೂಲಕ ಒಂದು ವರ್ಷದ ಸ್ಕ್ರೀನ್ ಪ್ರೊಟೆಕ್ಷನ್ ಯೋಜನೆಯನ್ನು ಪಡೆಯಬಹುದು.
ಅತ್ಯುತ್ತಮ ಕಾರ್ಯಕ್ಷಮತೆ
ಗ್ಯಾಲಕ್ಸಿ ಎ06 5ಜಿ ಎಲ್ಲಾ ನೆಟ್ ವರ್ಕ್ ಗಳಿಗೂ ಹೊಂದಾಣಿಕೆಯಾಗುತ್ತಿದ್ದು, 12 5ಜಿ ಬ್ಯಾಂಡ್ ಗಳ ಮೂಲಕ ಅತ್ಯುತ್ತಮ ಕನೆಕ್ಟಿವಿಟಿ ಒದಗಿಸುತ್ತದೆ. ಎಲ್ಲಾ ಟೆಲಿಕಾಂ ಆಪರೇಟರ್ ಗಳಾದ್ಯಂತ ವೇಗವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಎಂಟಿಕೆ ಡಿ6300 ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸುವ ಗ್ಯಾಲಕ್ಸಿ ಎ06 5ಜಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಮತ್ತು ಸುಲಭವಾಗಿ ಮಲ್ಟಿಟಾಸ್ಕಿಂಗ್, ಗೇಮಿಂಗ್ ಮತ್ತು ಸ್ಟ್ರೀಮಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಸ್ಮಾರ್ಟ್‌ಫೋನ್ ರಾಮ್ ಪ್ಲಸ್ ಫೀಚರ್ ಮೂಲಕ 12 ಜಿಬಿ ವರೆಗಿನ ರಾಮ್ ಅನ್ನು ಒದಗಿಸುತ್ತದೆ.
ಕ್ಯಾಮರಾ ಮತ್ತು ಡಿಸ್ ಪ್ಲೇ
ಈ ಸ್ಮಾರ್ಟ್ ಫೋನ್ ಅದ್ಭುತವಾದ ಕ್ಯಾಮೆರಾ ಹೊಂದಿದ್ದು, ಸೊಗಸಾದ ಮತ್ತು ಡೀಟೇಲ್ ಆದ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. 50 ಎಂಪಿ ರೇರ್ ಮೇನ್ ಕ್ಯಾಮೆರಾ ಹೊಂದಿದ್ದು, ಜೊತೆಗೆ ಹೆಚ್ಚು ಸ್ಪಷ್ಟತೆಗಾಗಿ 2 ಎಂಪಿಯ ಡೆಪ್ತ್ ಕ್ಯಾಮೆರಾ ಕೂಡ ಇದೆ. 8 ಎಂಪಿ ಫ್ರಂಟ್ ಕ್ಯಾಮರಾ ಹೊಂದಿದ್ದು, ಉತ್ತಮ ಗುಣಮಟ್ಟದ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.
ಸ್ಮಾರ್ಟ್‌ಫೋನ್ ನಯವಾದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದೆ ಮತ್ತು ಅದರ ವಿಸ್ತಾರವಾದ 6.7-ಇಂಚಿನ, 20:9 ಆಸ್ಪೆಕ್ಟ್ ರೇಶಿಯೋ ಹೊಂದಿರುವ ಹೆಚ್ ಡಿ+ ಡಿಸ್ ಪ್ಲೇ ಹೊಂದಿದೆ. ಈ ಡಿಸ್ ಪ್ಲೇ ಸೊಗಸಾದ ದೃಶ್ಯಗಳನ್ನು ಕಾಣಿಸಲು ನೆರವಾಗುತ್ತದೆ. ಸ್ಮಾರ್ಟ್‌ಫೋನ್ 5,000 ಎಂಎಎಚ್ ಬ್ಯಾಟರಿಯನ್ನು ಸಹ ಹೊಂದಿದೆ ಮತ್ತು ವಿಭಾಗದಲ್ಲಿ ಉತ್ತಮವಾದ 25 ವಾರ್ಪ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ವಿಶ್ವಾಸಾರ್ಹತೆ
ಗ್ಯಾಲಕ್ಸಿ ಎ06 5ಜಿ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 15 ಮತ್ತು ಸ್ಯಾಮ್‌ಸಂಗ್‌ನ ಒನ್ ಯುಐ 7 ನೊಂದಿಗೆ ಲಭ್ಯವಿರುತ್ತದೆ. ಬಳಕೆದಾರರು ಹೊಸ ಸಾಫ್ಟ್ ವೇರ್ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎ06 5ಜಿ ಅತ್ಯುತ್ತಮ ವಿಶ್ವಾಸಾರ್ಹತೆ ಹೊಂದಿದ್ದು, 4 ಜನರೇಷನ್ ಓಎಸ್ ಅಪ್ ಡೇಟ್ ಗಳು ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್ ಗಳನ್ನು ನೀಡುತ್ತದೆ. ಈ ವಿಶಿಷ್ಟ ಅಪ್ ಗ್ರೇಡ್‌ಗಳು ಮತ್ತು ಅಪ್ ಡೇಟ್ ಗಳು ಸಾಧನವನ್ನು ಯಾವಾಗಲೂ ಹೊಸತಾಗಿ ಇರುವಂತೆ ಮಾಡಲು ಸಹಕರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಸುಲಭವಾಗಿ ಮತ್ತು ಸೊಗಸಾಗಿ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎ06 5ಜಿ ಐಪಿ54 ರೇಟಿಂಗ್ ಗಳಿಸಿದ್ದು, ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆ ನೀಡುತ್ತದೆ.
ಗ್ಯಾಲಕ್ಸಿ ಎಕ್ಸ್ ಪೀರಿಯನ್ಸ್
ಸ್ಯಾಮ್‌ಸಂಗ್ ಮೊದಲ ಬಾರಿಗೆ ‘ವಾಯ್ಸ್ ಫೋಕಸ್’ ಅನ್ನು ಸ್ಮಾರ್ಟ್ ಫೋನ್ ನಲ್ಲಿ ಪರಿಚಯಿಸುತ್ತಿದ್ದು, ಗದ್ದಲ ಇರುವ ಪರಿಸರದಲ್ಲಿ ಕರೆಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಈ ಫೀಚರ್ ನೆರವಾಗಲಿದೆ. ಕಾಲ್ ಸ್ಪಷ್ಟತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಭಾರತದ ಮೊದಲ ವಿಶಿಷ್ಟ ಆವಿಷ್ಕಾರವಾಗಿದೆ. ಈ ಫೀಚರ್ ಸಂಭಾಷಣೆಗಳನ್ನು ಸ್ಪಷ್ಟವಾಗಿಸುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೇಳಿಸುವಂತೆ ಮಾಡುತ್ತದೆ. ಈ ಫೀಚರ್ ಭಾರತೀಯ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಅರ್ಥಪೂರ್ಣ ಆವಿಷ್ಕಾರಗಳನ್ನು ಒದಗಿಸುವ ಸ್ಯಾಮ್ ಸಂಗ್ ನ ಬದ್ಧತೆಯನ್ನು ಸಾರುತ್ತದೆ. ಈ ಸ್ಮಾರ್ಟ್ ಫೋನ್ ಸ್ಯಾಮ್ ಸಂಗ್ ನ ಅತ್ಯುತ್ತಮ ರಕ್ಷಣಾ ವ್ಯವಸ್ಥೆ ಆಗಿರುವ ನಾಕ್ಸ್ ವಾಲ್ಟ್ ಭದ್ರತೆಯನ್ನು ಹೊಂದಿದ್ದು, ಗ್ರಾಹಕರ ಸುರಕ್ಷತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡುತ್ತದೆ. ಜೊತೆಗೆ ಬಳಕೆದಾರರಿಗೆ ತಮ್ಮ ಡೇಟಾವನ್ನು ಸುರಕ್ಷಿತಗೊಳಿಸಲು ಮತ್ತು ಒಟ್ಟಾರೆ ಅತ್ಯುತ್ತಮ ಅನುಭವ ಹೊಂದಲು ಅನುವು ಮಾಡಿಕೊಡುತ್ತದೆ.