ಸ್ಯಾಮ್ ಸಂಗ್ ನ 6 ಜನರೇಷನ್ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6, ಗ್ಯಾಲಕ್ಸಿ ಝಡ್ ಫ್ಲಿಪ್6 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ, ವಾಚ್7 ಹಾಗೂ ಬಡ್ಸ್3 ಉತ್ಪನ್ನಗಳ ಮಾರಾಟ ಆರಂಭವಾಗಿದ್ದು, ನಿಮ್ಮ ಹತ್ತಿರದ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ. ಗ್ರಾಹಕರು Samsung.com, Amazon.in ಮತ್ತು Flipkart ನಲ್ಲಿ ಕೂಡ ಈ ಸಾಧನಗಳನ್ನು ಖರೀದಿಸಬಹುದಾಗಿದೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಈಗಾಗಲೇ ಭಾರಿ ಯಶಸ್ಸನ್ನು ಸಾಧಿಸಿವೆ. ಹಳೆಯ ಪೀಳಿಗೆಯ ಫೋಲ್ಡೇಬಲ್‌ಗಳಿಗೆ ಹೋಲಿಸಿದರೆ ಪ್ರೀ ಆರ್ಡರ್ ಆರಂಭಿಸಿದ 24 ಗಂಟೆಗಳಲ್ಲಿಯೇ 40% ಹೆಚ್ಚಿನ ಪ್ರೀ-ಆರ್ಡರ್‌ಗಳನ್ನು ಗಳಿಸಿಕೊಂಡಿದೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6 ಇದುವರೆಗಿನ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಗಳಲ್ಲಿಯೇ ಅತಿ ತೆಳ್ಳಗಿನ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ. ಸಿಮ್ಮೆಟ್ರಿಕಲ್ ವಿನ್ಯಾಸ ಅಂದ್ರೆ ಎರಡೂ ಬದಿಯಲ್ಲಿ ಒಂದೇ ಥರ ಕಾಣುವ ವಿನ್ಯಾಸ ಮತ್ತು ನೇರವಾದ ಎಡ್ಜ್ ಅನ್ನು ಹೊಂದಿವೆ. ಈ ಗ್ಯಾಲಕ್ಸಿ ಝಡ್ ಸರಣಿಯು ಅತ್ಯುತ್ತಮ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದ್ದು, ಇದು ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯ ಫೋನ್ ಗಳಾಗಿವೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಗಳು ಗ್ಯಾಲಕ್ಸಿಯ ಸ್ನ್ಯಾಪ್ ಡ್ರಾಗನ್ ® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಹೊಂದಿದ್ದು, ಇದು ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದೆ. ಅತ್ಯುತ್ತಮ ದರ್ಜೆಯ ಸಿಪಿಯು, ಜಿಪಿಯು ಮತ್ತು ಎನ್ ಪಿಯು ಹೊಂದಿದ್ದು, ಅತ್ಯಪೂರ್ವ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿಯ ಡಿಫೆನ್ಸ್- ಗ್ರೇಡ್ ಮಲ್ಟಿ ಲೇಯರ್ ಭದ್ರತಾ ಪ್ಲಾಟ್‌ಫಾರ್ಮ್ ಆಗಿರುವ ಸ್ಯಾಮ್‌ಸಂಗ್ ನಾಕ್ಸ್ ಭದ್ರತೆಯನ್ನು ಹೊಂದಿದೆ. ಇದನ್ನು ನಿಮ್ಮ ಸಾಧನದ ಮುಖ್ಯ ಮಾಹಿತಿಗಳನ್ನು ರಕ್ಷಿಸಲೆಂದು ಮತ್ತು ಅಪಾಯಗಳಿಂದ ರಕ್ಷಣೆ ಒದಗಿಸಲೆಂದೇ ವಿನ್ಯಾಸ ಮಾಡಲಾಗಿದೆ.
ಗ್ಯಾಲಕ್ಸಿ ವಾಚ್ ಅಲ್ಟ್ರಾ – ಗ್ಯಾಲಕ್ಸಿ ವಾಚ್ ಪೋರ್ಟ್‌ಫೋಲಿಯೊಗೆ ಹೊಸತಾದ ಮತ್ತು ಅತ್ಯಂತ ಶಕ್ತಿಶಾಲಿಯಾದ ಸೇರ್ಪಡೆಯಾಗಿದೆ. ಇದು ತನ್ನ ವಿಶಿಷ್ಟ ಗುಣ ಮತ್ತು ಅಪೂರ್ವ ಸಾಮರ್ಥ್ಯಗಳ ಮೂಲಕ ಹೆಚ್ಚಿನ ಫಿಟ್ ನೆಸ್ ಸಾಧನೆ ಮಾಡಲು ಪ್ರೋತ್ಸಾಹಿಸುತ್ತದೆ ಮತ್ತು ಉತ್ತಮ ಫಿಟ್‌ನೆಸ್ ಅನುಭವ ಒದಗಿಸುತ್ತದೆ. ಗ್ಯಾಲಕ್ಸಿ ವಾಚ್7ನಲ್ಲಿ ಗ್ರಾಹಕರು 100ಕ್ಕೂ ಹೆಚ್ಚು ವರ್ಕ್‌ಔಟ್‌ಗಳನ್ನು ಕರೆಕ್ಟಾಗಿ ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ಫಿಟ್ ನೆಸ್ ಗುರಿಗಳನ್ನು ಸಾಧಿಸಲು ವ್ಯಾಯಾಮ ದಿನಚರಿಯಲ್ಲಿ ವಿವಿಧ ವ್ಯಾಯಾಮಗಳನ್ನು ಸೇರಿಸಿಕೊಳ್ಳುವ ಮೂಲಕ ಹೊಸ ಫಿಟ್ ನೆಸ್ ದಿನಚರಿಯನ್ನು ಸಿದ್ಧಗೊಳಿಸಬಹುದು. ಗ್ಯಾಲಕ್ಸಿ ವಾಚ್7 ನಿದ್ರಾ ಸಮಯದ ವಿಶ್ಲೇಷಣೆ ಮಾಡಲು ಹೊಸತಾದ ಆಧುನಿಕ ಗ್ಯಾಲಕ್ಸಿ ಎಐ ಅಲ್ಗಾರಿದಮ್ ಅನ್ನು ಹೊಂದಿದೆ. ಅದರ ಮೂಲಕ ಈ ವಾಚ್ ಬಳಸುವವರು ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಮತ್ತು ರಕ್ತದೊತ್ತಡ (ಬಿಪಿ)ದ ಮೇಲೆ ನಿಗಾ ಇರಿಸಿಕೊಂಡು ನಿಮ್ಮ ಹೃದಯದ ಆರೋಗ್ಯದ ಕುರಿತು ಸೂಕ್ತ ತಿಳುವಳಿಕೆ ಪಡೆಯಬಹುದು.
ಗ್ಯಾಲಕ್ಸಿ ಎಐ ಆಧರಿತವಾದ ಗ್ಯಾಲಕ್ಸಿ ಬಡ್ಸ್3 ಹೋಲಿಸಲು ಅಸಾಧ್ಯವಾದ ಧ್ವನಿ ಗುಣಮಟ್ಟವನ್ನು ನೀಡುವಂತೆ ರಚಿಸಲಾಗಿದೆ ಮತ್ತು ಆರಾಮದಾಯಕವಾಗಿ ಫಿಟ್ ಆಗುವಂಥಾ ಹೊಸ ಕಂಪ್ಯೂಟೇಶನಲ್ ಓಪನ್-ಟೈಪ್ ವಿನ್ಯಾಸದೊಂದಿಗೆ ಬರುತ್ತದೆ.
ಬೆಲೆ ಮತ್ತು ಆಫರ್ ಗಳು
ಗ್ಯಾಲಕ್ಸಿ ಝಡ್ ಫ್ಲಿಪ್6 ಆರಂಭಿಕ ಬೆಲೆ ರೂ. 109999 ಹೊಂದಿದೆ ಮತ್ತು ನೀಲಿ, ಮಿಂಟ್ ಮತ್ತು ಸಿಲ್ವರ್ ಶ್ಯಾಡೋ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ಗ್ಯಾಲಕ್ಸಿ ಝಡ್ ಫ್ಲಿಪ್6 ಅನ್ನು ಕೇವಲ ರೂ.4250 ನೀಡುವುದರ ಮೂಲಕ 24 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯ ಬಳಸಿಕೊಂಡು ಖರೀದಿ ಮಾಡಬಹುದು.
ಗ್ಯಾಲಕ್ಸಿ ಝಡ್ ಫೋಲ್ಡ್6 ಆರಂಭಿಕ ಬೆಲೆ ರೂ. 164999 ಆಗಿದೆ ಮತ್ತು ಸಿಲ್ವರ್ ಶ್ಯಾಡೋ, ನೇವಿ ಮತ್ತು ಪಿಂಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ಗ್ಯಾಲಕ್ಸಿ ಝಡ್ ಫೋಲ್ಡ್6 ಅನ್ನು ಕೇವಲ ರೂ.6542 ನೀಡಿ 24 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯ ಬಳಸಿಕೊಂಡು ಖರೀದಿ ಮಾಡಬಹುದು.
ಗ್ಯಾಲಕ್ಸಿ ವೇರೇಬಲ್ ಗಳಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ಬಡ್ಸ್3 ಅನ್ನು ಖರೀದಿಸುವಾಗ ಗ್ರಾಹಕರು ರೂ. 18000 ವರೆಗಿನ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಅನ್ನು ಖರೀದಿಸುವ ಗ್ರಾಹಕರು ಗ್ಯಾಲಕ್ಸಿ ಝಡ್ ಅಶ್ಯೂರೆನ್ಸ್ ಅನ್ನು ಪಡೆಯುತ್ತಾರೆ. ಆ ಆಫರ್ ನಲ್ಲಿ ಕೇವಲ ರೂ.2999ರಲ್ಲಿ ಉದ್ಯಮದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಿರುವ ಟೂ ಸ್ಕ್ರೀನ್/ಪಾರ್ಟ್ಸ್ ರಿಪ್ಲೇಸ್ ಮೆಂಟ್ ಸೌಲಭ್ಯ ಪಡೆಯಬಹುದು.
ಗ್ಯಾಲಕ್ಸಿ ವಾಚ್ ಅಲ್ಟ್ರಾ ಬೆಲೆ ರೂ. 59999 ಆಗಿದೆ ಮತ್ತು ಗ್ಯಾಲಕ್ಸಿ ವಾಚ್7 40ಎಂಎಂ ವೇರಿಯಂಟ್ ಆರಂಭಿಕ ಬೆಲೆ ರೂ. 29999 ಆಗಿದೆ. ಗ್ರಾಹಕರು 24 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಪಡೆಯಬಹುದು. ಗ್ಯಾಲಕ್ಸಿ ಬಡ್ಸ್3 ಬೆಲೆ ರೂ. 14999. ಮತ್ತಷ್ಟು ಆಫರ್ ಮತ್ತಿತರ ವಿವರಗಳಿಗಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ.