ಗ್ಯಾಲಾಕ್ಸಿ ವಾಚ್4 ಮತ್ತು ಗ್ಯಾಲಾಕ್ಸಿ ವಾಚ್4 ಕ್ಲಾಸಿಕ್ ಅನ್ನು ಬುಧವಾರ ಬಿಡುಗಡೆ ಮಾಡಿದೆ ಸ್ಯಾಮ್ಸಂಗ್. ಗೂಗಲ್ ಜೊತೆಗೆ ಜಂಟಿಯಾಗಿ ಈ ಸ್ಮಾರ್ಟ್‌ವಾಚ್‌ಗಳನ್ನು ಅಭಿವೃದ್ಧಿಪಡಿಸಿದ ಸ್ಯಾಮ್ಸಂಗ್ ವೇರ್ ಒಎಸ್ ಅನ್ನು ಅಳವಡಿಸಿದೆ.
ಈ ವಾಚ್‌ಗಳಲ್ಲಿರುವ 3-ಇನ್-1 ಸೆನ್ಸಾರ್ ಮುಖಾಂತರ ಬಳಕೆದಾರರು ತಮ್ಮ ರಕ್ತದೊತ್ತಡವನ್ನು ಆಗಾಗ ಪರೀಕ್ಷೆ ಮಾಡಿಕೊಳ್ಳುತ್ತಿರಬಹುದು. ಜೊತೆಗೆ ಹೃಯಯಬಡಿತದ ಆಪ್ಟಿಕಲ್ ಹಾಗೂ ಎಲೆಕ್ಟ್ರಿಕಲ್ ದರ ಮತ್ತು ಬಯೋಎಲೆಕ್ಟ್ರಿಕಲ್ ಇಂಪಿಡೆನ್ಸ್‌ನ ವಿಶ್ಲೇಷಣೆಯನ್ನು ಮಾಡಿಕೊಳ್ಳುತ್ತಿರಬಹುದಾಗಿದೆ.
ಟೆರೆಸ್ ಮೇಲೆ ನಿಂತು ವರದಿ ಮಾಡುವ ಮೂಲಕ ಸಿಎಂ ಗಮನ ಸೆಳೆದ 7ರ ಪೋರ…..!
ರಕ್ತದಲ್ಲಿರುವ ಆಮ್ಲಜನಕ ಪ್ರಮಾಣದೊಂದಿಗೆ ದೇಹದ ಇನ್ನಷ್ಟು ಪ್ರಕ್ರಿಯೆಗಳ ದರವನ್ನೂ ಸಹ ಬಳಕೆದಾರರು ಚೆಕ್ ಮಾಡಿಕೊಳ್ಳುತ್ತಿರಬಹುದಾಗಿದೆ. 42ಎಂಎಂ ಹಾಗೂ 46ಎಂಎಂ ಅವತರಣಿಕೆಗಳಲ್ಲಿ ಸಿಗುವ ಈ ವಾಚುಗಳ ಬೆಲೆಯು ಕ್ರಮವಾಗಿ $349.99 ಹಾಗೂ $399.99 ಗಳಷ್ಟಿದೆ.