ಮುಂಬರುವ ದಿನಗಳಲ್ಲಿ 100 ಯುನಿಕಾರ್ನ್ಗಳನ್ನು ಸೃಷ್ಟಿಸುವ ಉದ್ದೇಶದಿಂದ ಸ್ಟಾರ್ಟ್-ಅಪ್ಗಳ ಸ್ಥಾಪನೆಗೆ ಬೆಂಬಲ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು 300 ಸ್ಟಾರ್ಟ್-ಅಪ್ಗಳಿಗೆ ಕೋಶ ನಿಧಿ, ಮಾರ್ಗಸೂಚನೆ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು ’ಸಮೃದ್ಧ್’ ಯೋಜನೆಗೆ ಚಾಲನೆ ಕೊಟ್ಟಿದೆ.
ಸಿಲಿಕಾನ್ ವ್ಯಾಲಿಯ ವೈಕಾಂಬಿನೇಟರ್ ಪಥದಲ್ಲಿ ಮೆಯ್ಟ್ವೈ ಆಕ್ಸಿಲರೇಟರ್ ಅನ್ನು ದೇಶದಲ್ಲಿ ಸ್ಟಾರ್ಟ್-ಅಪ್ ವಾತಾವರಣ ಸೃಷ್ಟಿಸಲು ಪರಿಚಯಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ವಿಶೇಷ ಕಾರ್ಯದರ್ಶಿ ಜ್ಯೋತಿ ಅರೋರಾ ತಿಳಿಸಿದ್ದಾರೆ.
BIG NEWS: ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ; ಮೂವರು ಶಂಕಿತರು ಅರೆಸ್ಟ್
ಇದಕ್ಕೂ ಮುನ್ನ 20ಕ್ಕೂ ಹೆಚ್ಚು ಸ್ಟಾರ್ಟ್-ಅಪ್ಗಳನ್ನು ಹತ್ತಿರದಿಂದ ನೋಡಿರುವ ತಮ್ಮ ಅನುಭವದ ಮೇಲೆ, ಈ ನವೋದ್ಯಮಗಳ ಪಯಣದ ಅತ್ಯಂತ ಮಹತ್ವದ ಘಟ್ಟವಾದ ಆಲೋಚನೆಗಳನ್ನು ಉತ್ಪನ್ನಗಳನ್ನಾಗಿ ಪರಿವರ್ತಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಅರಿವಿರುವುದಾಗಿ ಐಟಿ ಹಾಗೂ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸಮೃದ್ಧಿ ಕಾರ್ಯಕ್ರಮದಡಿಯಲ್ಲಿ ಮೆಯ್ಟಿ ಆಕ್ಸಿಲರೇಟರ್ ಮೂಲಕ ಆಯ್ದ ಸ್ಟಾರ್ಟ್-ಅಪ್ಗಳಿಗೆ ಕೋಶನಿಧಿ ರೂಪದಲ್ಲಿ 40 ಲಕ್ಷ ರೂಪಾಯಿಗಳವರೆಗೂ ಆರ್ಥಿಕ ಬೆಂಬಲ ಹಾಗೂ ಆರು ತಿಂಗಳವರೆಗೂ ಮಾರ್ಗಸೂಚನೆಗಳನ್ನು ನೀಡಲಾಗುತ್ತದೆ.