ಅಕ್ಷಯ್ಕುಮಾರ್ ನಟನೆಯ ಬಹುನಿರೀಕ್ಷಿತ ಸಿನೆಮಾ ʼಪೃಥ್ವಿರಾಜ್ʼ ರಾಜ ಪೃಥ್ವಿರಾಜ್ ಚೌಹಾಣ್ ಕುರಿತ ಐತಿಹಾಸಿಕ ಸಿನೆಮಾ ಇದಾಗಿದ್ದು. ಯಶ್ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಸಿನೆಮಾ ಜೂನ್ 3ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡೋ ಪ್ಲಾನ್ ಮಾಡಲಾಗಿದೆ.
ವಿಶೇಷವೆಂದರೆ ಯಶ್ರಾಜ್ ಫಿಲ್ಮ್ಸ್ ಇದೇ ಮೊದಲ ಬಾರಿಗೆ ಐತಿಹಾಸಿಕ ಕಥೆಯನ್ನ ಇಟ್ಟುಕೊಂಡು ನಿರ್ಮಾಣ ಮಾಡಿರೋ ಸಿನಿಮಾ ಇದಾಗಿದೆ. ಆದರೆ ಈಗ ಇದೇ ಸಿನೆಮಾತಂಡ ಕೊನೆ ಕ್ಷಣದಲ್ಲಿ ಟೈಟಲ್ ಚೇಂಜ್ ಮಾಡಲು ನಿರ್ಧರಿಸಿದೆ.
ಬಿಪಿಎಲ್ ಕುಟುಂಬದವರು ಸೇರಿ ಗ್ರಾಮೀಣ ಮಹಿಳೆಯರಿಗೆ ತಿಂಗಳಿಗೆ 1 ರೂ.ಗೆ 10 ಸ್ಯಾನಿಟರಿ ನ್ಯಾಪ್ ಕಿನ್ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ
ಹೌದು.. ಈಗಾಗಲೇ `ಪೃಥ್ವಿರಾಜ್` ಅನ್ನೊ ಸಿನೆಮಾ ಟೈಟಲ್ ಇಟ್ಟಿದ್ದು, ಈಗ ಅದೆ ಟೈಟಲ್ನ ಬದಲಾಯಿಸಿ `ಸಾಮ್ರಾಟ್ ಪೃಥ್ವಿರಾಜ್`ಅಂತ ಇಡಲು ಯಶ್ರಾಜ್ ಫಿಲ್ಮ್ಸ್ ನಿರ್ಧರಿಸಿದೆ.
ಶ್ರೀ ರಜಪೂತ್ ಕರ್ಣಿ ಸೇನೆಯವರು ‘ಪೃಥ್ವಿರಾಜ್’ ಸಿನಿಮಾದ ಶೀರ್ಷಿಕೆ ಬದಲಿಸುವಂತೆ ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಅರ್ಜಿಯನ್ನು ಸಲ್ಲಿಸಿದ್ದರು. ಆ ಬಳಿಕ ಸಾಕಷ್ಟು ಸಭೆಗಳ ನಂತರ ರಜಪೂತ್ ಸಮುದಾಯದ ಭಾವನೆಗಳನ್ನು ಅರ್ಥೈಸಿಕೊಂಡು, ಯಶ್ ರಾಜ್ ಸಂಸ್ಥೆಯು ಮೇ 27ರಂದು ಶೀರ್ಷಿಕೆ ಚೇಂಜ್ ಮಾಡಲು ಒಪ್ಪಿಕೊಂಡಿದೆ. ಇದೇ ಕಾರಣಕ್ಕಾಗಿ ಈಗ ‘ಸಾಮ್ರಾಟ್ ಪೃಥ್ವಿರಾಜ್’ ಹೆಸರಿನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಒಪ್ಪಿದೆ.
ಶೀರ್ಷಿಕೆ ಬದಲಾವಣೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯಶ್ ರಾಜ್ ಫಿಲ್ಮ್ಸ್, ‘1970ರಿಂದಲೂ ಭಾರತೀಯ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಶ್ ರಾಜ್ ಫಿಲ್ಮ್ಸ್, ‘ಈ ಸಿನಿಮಾದ ಶೀರ್ಷಿಕೆಗೆ ಸಂಬಂಧಿಸಿದಂತೆ ಯಾರ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ರಾಜ ಪೃಥ್ವಿರಾಜ್ ಚೌಹಾಣ್ ಅವರನ್ನು ಅಗೌರವಿಸುವ ಉದ್ದೇಶವನ್ನು ಹೊಂದಿಲ್ಲ. ಈ ಚಿತ್ರದ ಮೂಲಕ ಅವರ ಶೌರ್ಯ, ಸಾಧನೆಗಳು ಮತ್ತು ನಮ್ಮ ರಾಷ್ಟ್ರದ ಇತಿಹಾಸಕ್ಕೆ ನೀಡಿದ ಕೊಡುಗೆಯನ್ನು ಸಂಭ್ರಮಿಸಲು ಇಷ್ಟಪಡುತ್ತೇವೆ. ನಾವು ನಡೆಸಿದ ಹಲವು ಸಭೆಗಳ ನಂತರ ‘ಸಾಮ್ರಾಟ್ ಪೃಥ್ವಿರಾಜ್’ ಎಂದು ಶೀರ್ಷಿಕೆಯನ್ನು ಬದಲಾಯಿಸಿದ್ದೇವೆ’ ಎಂದು ಯಶ್ ರಾಜ್ ಫಿಲ್ಮ್ಸ್ ಹೇಳಿದೆ.