ದಿನದಿಂದ ದಿನಕ್ಕೆ ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳ ಹೆಚ್ಚಾಗ್ತಾ ಹೋಗ್ತಿದೆ. ಈ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಹಿಂದಿರುಗಿದ ಮತ್ತು ಒಂದು ದಿನ ಮುಂಚಿತವಾಗಿ ಮಂಗನ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದ 22 ವರ್ಷದ ಯುವಕನ ಸಾವಿನ ಕಾರಣವನ್ನು ತನಿಖೆ ಮಾಡುವುದಾಗಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ರೋಗಿಯ ವಯಸ್ಸು ಕೇವಲ 22 ವರ್ಷ ಆಗಿದ್ದು, ಈಗಾಗಲೇ ರೋಗಿಯ ಬ್ಲಡ್ ಸ್ಯಾಂಪಲ್ ಸೇರಿದಂತೆ ಇನ್ನೂ ಅನೇಕ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಮಂಕಿಪಾಕ್ಸ್ ಕಾಯಿಲೆಯಾ ಅಥವಾ ಬೇರೆ ಯಾವುದಾದರೂ ಆರೋಗ್ಯ ಸಮಸ್ಯೆ ಇತ್ತಾ ಅನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಜುಲೈ 21 ರಂದು ಯುಎಇಯಿಂದ ಬಂದ ನಂತರ ಈ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಏಕೆ ವಿಳಂಬ ಮಾಡಲಾಗಿದೆ ಎಂಬುದರ ವಿಚಾರಣೆ ನಡೆಸಲಾಗುವುದು ಎಂದು ಜಾರ್ಜ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಸಚಿವೆ, “ಈ ನಿರ್ದಿಷ್ಟ ರೀತಿಯ ಕೋವಿಡ್ -19 ನಂತಹ ಕಾಯಿಲೆ, ಉನ್ನತ ಮಟ್ಟದಲ್ಲಿ ಸಾಂಕ್ರಾಮಿಕ ಸೋಂಕು ಅಲ್ಲ, ಆದರೆ ಅದು ಹರಡುತ್ತದೆ ಎಂದಿದ್ದಾರೆ. ಹೋಲಿಕೆಯಲ್ಲಿ ಈ ರೀತಿಯ ಮಂಕಿಪಾಕ್ಸ್ನಿಂದ ಮರಣ ಪ್ರಮಾಣ ತುಂಬಾ ಕಡಿಮೆಯಾಗಿದೆ. ಆದ್ದರಿಂದ, 22 ವರ್ಷದ ಯುವಕನಿಗೆ ಬೇರೆ ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆ ಇಲ್ಲದ ಕಾರಣ ಈ ನಿರ್ದಿಷ್ಟ ಪ್ರಕರಣದಲ್ಲಿ ಏಕೆ ಸಾವನ್ನಪ್ಪಿದ್ದಾನೆ ಎಂಬುದನ್ನು ನಾವು ತನಿಖೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಮಂಗನ ಕಾಯಿಲೆ ಹರಡುವುದರಿಂದ ಅದನ್ನು ತಡೆಯಲು ಬೇಕಾದ ಎಲ್ಲ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ವೀಣಾ ಜಾರ್ಜ್ ಅವರು ಮಾಹಿತಿ ನೀಡಿದ್ದಾರೆ.
ರೋಗ ಪತ್ತೆಯಾದ ಇತರ ದೇಶಗಳಿಂದ ನಿರ್ದಿಷ್ಟ ರೀತಿಯ ಕಾಯಿಲೆಯ ಬಗ್ಗೆ ಯಾವುದೇ ಅಧ್ಯಯನ ಲಭ್ಯವಿಲ್ಲ ಮತ್ತು ಇದೇ ಕಾರಣದಿಂದ ಕೇರಳ ಅದರ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. 22 ವರ್ಷದ ವ್ಯಕ್ತಿ ಶನಿವಾರ ಬೆಳಗ್ಗೆ ತ್ರಿಶೂರ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ಈಗ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.