ಭಾರತೀಯರು ತಮ್ಮ ‘ದೇಸಿ ಜುಗಾಡ್’ ಬಳಸುವುದರಿಂದ ಹಿಡಿದು ಅಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗಳನ್ನು ಮಾಡುವವರೆಗೆ ಎಲ್ಲದಕ್ಕೂ ತಮ್ಮ ಸೃಜನಶೀಲ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅಗರಬತ್ತಿಗಳಿಂದ ತುಂಬಿದ ಸಮೋಸಾದ ಫೋಟೋ ವೈರಲ್ ಆಗಿದ್ದು, ಅಂತರ್ಜಾಲದ ಗಮನವನ್ನು ಸೆಳೆದಿದೆ.
ಶಿಖರ್ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಫೋಟೋ ವೈರಲ್ ಆಗಿದೆ. ಜಿಲೇಬಿಗಳ ಜೊತೆಗೆ ಸಮೋಸಾ ಇಡಲಾಗಿದ್ದು, ಅಗರಬತ್ತಿಯನ್ನು ಬೆಳಗಲು ಸಮೋಸಾ ಬಳಕೆ ಮಾಡಲಾಗಿದೆ!
ಆಹಾರ ಪದಾರ್ಥಗಳೊಂದಿಗೆ ಅಗರಬತ್ತಿಗಳನ್ನು ಬಳಸುವುದರಕ್ಕೆ ನೆಟ್ಟಿಗ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ, ಸಮೋಸಾವನ್ನು ಬಳಸಿರುವುದಕ್ಕೆ ಹುಬ್ಬೇರಿಸಿದ್ದಾರೆ. ದೇವರುಗಳಿಗೆ ನೈವೇದ್ಯ ಮಾಡಿ, ಆದರೆ ರಾಸಾಯನಿಕ ತುಂಬಿದ ಸಮೋಸಾವನ್ನು ಜನರಿಗೆ ನೀಡಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
https://twitter.com/awfullyfamished/status/1634459476827963394?ref_src=twsrc%5Etfw%7Ctwcamp%5Etweetembed%7Ctwterm%5E1634459476827963394%7Ctwgr%5E6a6269cb634f372d56cacbcd040e392f48769ebf%7Ctwcon%5Es1_&ref_url=https%3A%2F%2Fwww.news18.com%2Fbuzz%2Fsamosabatti-desi-shopkeeper-lighting-incense-sticks-in-samosa-amuses-internet-7279927.html