ಮಧ್ಯಪ್ರದೇಶದ ಪನ್ನಾದ ಹೋಟೆಲ್ ಒಂದರಲ್ಲಿ ವ್ಯಕ್ತಿಯೊಬ್ಬ ಸಮೋಸಾಕ್ಕಾಗಿ ಆಲೂಗಡ್ಡೆಯನ್ನು ಕಾಲುಗಳಿಂದ ಪುಡಿಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಅಜಯ್ಘರ್ ಪ್ರದೇಶದ ಪ್ರಸಿದ್ಧ ಚಟ್ಟೋರಿ ಚಟ್ಕಾರ ರೆಸ್ಟೋರೆಂಟ್ ನಲ್ಲಿ ಕಾರ್ಮಿಕನೊಬ್ಬ ಆಲೂಗಡ್ಡೆಯನ್ನು ತನ್ನ ಪಾದಗಳಿಂದ ತುಳಿಯುವ ದೃಶ್ಯ ವೈರಲ್ ಆಗಿದೆ.ವೀಡಿಯೊ ವೈರಲ್ ಆದ ನಂತರ, ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಹೋಟೆಲ್ ಗೆ ಭೇಟಿ ನೀಡಿದರು. ಇಲಾಖೆಯು ಆಲೂಗಡ್ಡೆಯಿಂದ ತಯಾರಿಸಿದ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸುತ್ತಿದೆ ಮತ್ತು ಆಲೂಗಡ್ಡೆಯಿಂದ ತಯಾರಿಸಿದ ವಸ್ತುಗಳನ್ನು ಸಹ ನಾಶಪಡಿಸುತ್ತಿದೆ ಎಂದು ತಿಳಿದು ಬಂದಿದೆ.
ಚಟೋರಿ ಚಟ್ಕಾರ ಪ್ರಸಿದ್ಧ ಉಪಾಹಾರ ಗೃಹವಾಗಿದ್ದು, ಇಲ್ಲಿ ಸಿಗುವ ಸಮೋಸಾಗಳನ್ನು ತಿನ್ನಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಈ ವಿಡಿಯೋ ನೋಡಿದ ಮೇಲಂತೂ ಯಾರೂ ಈ ಕಡೆ ಬರೋದಿಲ್ಲ ಬಿಡಿ.