alex Certify ‘ಇದು ಬಾಲಿವುಡ್ ನ ಕೊಳಕು ಮನಸ್ಥಿತಿ’; ಸಿನಿರಂಗದಲ್ಲಿನ ಒತ್ತಡದ ಬಗ್ಗೆ ಶಾಕಿಂಗ್ ಸತ್ಯ ಬಹಿರಂಗಪಡಿಸಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಇದು ಬಾಲಿವುಡ್ ನ ಕೊಳಕು ಮನಸ್ಥಿತಿ’; ಸಿನಿರಂಗದಲ್ಲಿನ ಒತ್ತಡದ ಬಗ್ಗೆ ಶಾಕಿಂಗ್ ಸತ್ಯ ಬಹಿರಂಗಪಡಿಸಿದ ನಟಿ

Sameera Reddy Exposes The Dirty Side Of Bollywood! Was Almost Forced To Get B**b Job Done: "Sab Log Kar Rahe Hai. Aap Kyu Nahi?"

ಬಾಲಿವುಡ್ ನಲ್ಲಿ ಬೆಳೆಯಲು ಕೆಲ ನಟಿಯರು ತಮ್ಮ ದೇಹ ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಸೇರಿದಂತೆ ಅವಕಾಶಕ್ಕಾಗಿ ನಿರ್ಮಾಪಕರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿಕೊಳ್ಳುತ್ತಾರೆಂಬ ಮಾತಿದೆ. ಈ ಬಗ್ಗೆ ಅನೇಕ ಚರ್ಚೆ, ಮಾತುಗಳು ಕೇಳಿಬರುತ್ತಿರುವ ಹೊತ್ತಲ್ಲಿ ನಟಿ ಸಮೀರಾ ರೆಡ್ಡಿ ಬಾಲಿವುಡ್ ನಲ್ಲಿ ನಟಿಯರನ್ನು ಹೇಗೆ ಕಾಣುತ್ತಾರೆ ಎಂಬುದನ್ನ ಬಹಿರಂಗಪಡಿಸಿದ್ದಾರೆ. ತಮ್ಮ ಸ್ತನವನ್ನು ಹೆಚ್ಚಿನ ಗಾತ್ರ ಮತ್ತು ಸುಂದರ ಆಕಾರಕ್ಕೆ ಬದಲಿಸಿಕೊಳ್ಳುವಂತೆ ಒತ್ತಡದ ಸಲಹೆ ಬಂದಿತ್ತು ಎಂಬುದನ್ನ ಹೇಳಿದ್ದಾರೆ.

ಸಮೀರಾ ರೆಡ್ಡಿ 2002 ರಲ್ಲಿ ಮೈನೆ ದಿಲ್ ತುಜ್ಕೋ ದಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ರೇಸ್, ಟ್ಯಾಕ್ಸಿ ನಂಬರ್ 9211, ಮುಸಾಫಿರ್, ತೇಜ್ ಮತ್ತು ಅಶೋಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದರು. ಇತ್ತೀಚಿಗಿನ ತಮ್ಮ ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗದೇ ನೈಸರ್ಗಿಕವಾಗಿ ಸೌಂದರ್ಯವನ್ನ ಕಾಪಾಡಿಕೊಂಡಿದ್ದೇನೆ. ಗೂಗಲ್ ಕೂಡ ತನ್ನ ವಯಸ್ಸನ್ನು 38 ವರ್ಷ ಎಂದು ತೋರಿಸುತ್ತಿದೆ. ಆದರೆ ಅಸಲಿಗೆ ನನಗೆ 45 ವರ್ಷ ಎಂದು ಹೇಳಿಕೊಂಡಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುವ ಒತ್ತಡದ ಬಗ್ಗೆ ಸಮೀರಾ ರೆಡ್ಡಿ ಬಹಿರಂಗಪಡಿಸಿದ್ದು, “ನನ್ನ ವೃತ್ತಿಜೀವನದ ಆರಂಭದಲ್ಲಿ ನಿನ್ನ ಸ್ತನದ ಗಾತ್ರ ಮತ್ತು ಆಕಾರವನ್ನು ಆಕರ್ಷಕವಾಗಿ ಬದಲಾಯಿಸಿಕೋ ಎಂಬ ಬಗ್ಗೆ ಸಾಕಷ್ಟು ಮಂದಿ ಒತ್ತಡ ಹೇರಿದರು. ಅರೆ, ಎಷ್ಟೋ ಜನ ಆ ರೀತಿ ಮಾಡುತ್ತಿದ್ದಾರೆ,ನೀನ್ಯಾಕೆ ಮಾಡುವುದಿಲ್ಲ ಎಂದಿದ್ದರು. ಆದರೆ ನಾನು ಅದಕ್ಕೆ ಒತ್ತು ನೀಡಲಿಲ್ಲ” ಎಂದಿದ್ದಾರೆ.

ಸಿನಿಮಾರಂಗದಲ್ಲಿ ಬಯಸುವ ಪರಿಪೂರ್ಣ 36-24-36 ಆಕಾರ ಹೊಂದುವುದನ್ನ ನಾನು ನಂಬುವುದಿಲ್ಲ. ವಾಸ್ತವವಾಗಿ ನಮ್ಮನ್ನು ತೋರಿಸುವುದನ್ನಷ್ಟೇ ನಾನು ನಂಬುತ್ತೇನೆಂದಿದ್ದಾರೆ.

“ನಾನು ಪ್ರತಿದಿನ ಬೇಗ ಏಳುತ್ತೇನೆ, ಮಕ್ಕಳೊಂದಿಗೆ ಆಡುತ್ತೇನೆ. ನಾನು 45 ವರ್ಷ ವಯಸ್ಸಿನವಳಾಗಿ ಅದ್ಭುತವಾಗಿ ಕಾಣುವ ಸಾಮರ್ಥ್ಯವನ್ನು ಹೊಂದಿದ್ದೇನೆ. ನಮ್ಮ ಬಿಳಿ ತಲೆಗೂದಲು, ಹೊಟ್ಟೆಯ ಕೊಬ್ಬು ಮತ್ತು ಮಾರ್ಕ್ ಗಳನ್ನು ಮರೆಮಾಡದೇ ಅದೇ ರೀತಿಯಲ್ಲಿ ತೋರಿಸಿದಾಗ, ಇದನ್ನು ನೋಡಿದ ಜನರು ತಮ್ಮಂತೆಯೇ ಹಲವು ಜನರಿದ್ದಾರೆಂದು ಭಾವಿಸುತ್ತಾರೆ. ಅದು ಬಿಟ್ಟು ವಯಸ್ಸು, ಕಲೆ ಎಲ್ಲವನ್ನೂ ಮರೆಮಾಚಿ ತೋರಿಸಿದರೆ ಅದು ಜನರ ಮೇಲೆ ನಾವು ಆ ರೀತಿ ಇಲ್ವಲ್ಲಾ ಎಂಬ ಒತ್ತಡ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಸಮೀರಾ ರೆಡ್ಡಿ 2014 ರಲ್ಲಿ ಉದ್ಯಮಿ ಅಕ್ಷಯ್ ವರ್ದೆ ಅವರನ್ನು ವಿವಾಹವಾದರು. ಅವರಿಗೆ ಓರ್ವ ಮಗ ಮತ್ತು ಮಗಳಿದ್ದು ಕುಟುಂಬದೊಂದಿಗೆ ಬದುಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...