ಸಲಿಂಗ ವಿವಾಹವನ್ನು ಅಂಗೀಕರಿಸಬೇಕೆಂಬ ವಾದಕ್ಕೆ ಯುಪಿ ಸರ್ಕಾರ ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಸಲಿಂಗಿಗಳ ವಿವಾಹ ಭಾರತೀಯ ಸಂಸ್ಕೃತಿ ಮತ್ತು ಧರ್ಮಗಳಿಗೆ ವಿರುದ್ಧವಾಗಿವೆ. ಅಲ್ಲದೇ ನಮ್ಮ ಕಾನೂನಿನ ಪ್ರಕಾರ ಅಮಾನ್ಯವಾಗಿರುತ್ತವೆ ಎಂದು ಅಲ್ಲಿನ ಸರ್ಕಾರ ಅಭಿಪ್ರಾಯ ನೀಡಿದೆ.
ಸರ್ಕಾರದ ಸಲ್ಲಿಸಿದ ಅಂಶಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಸಲಿಂಗಿಗಳ ವಿವಾಹ ಅಂಗೀಕರಿಸುವ ಕೋರಿಕೆಯನ್ನು ತಿರಸ್ಕರಿಸಿದೆ.
ಅಂಜುದೇವಿ ಎಂಬುವವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, 23 ವರ್ಷದ ತಮ್ಮ ಮಗಳನ್ನು ಮತ್ತೊಬ್ಬ 22 ವರ್ಷದ ಮಹಿಳೆ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ, ತನ್ನ ಮಗಳನ್ನು ಸುಪರ್ದಿಗೆ ಕೊಡುವಂತೆ ಕೋರಿದ್ದರು.
ಏಪ್ರಿಲ್ 7 ರಂದು ಆ ಹುಡುಗಿಯರು ನ್ಯಾಯಾಲಯಕ್ಕೆ ಬಂದು ತಾವು ಮೇಜರ್ ಆಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ, ನಮ್ಮ ವಿವಾಹಕ್ಕೆ ಮಾನ್ಯತೆ ನೀಡುವಂತೆ ಮನವಿ ಎಂದು ಸಲ್ಲಿಸಿದರು.
ಈ ವೇಳೆ ಯುಪಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು, ಭಾರತೀಯ ಸಂಸ್ಕೃತಿ, ಧರ್ಮ ಮತ್ತು ಕಾನೂನಿನ ಪ್ರಕಾರ ದೇಶವು ನಡೆಯುತ್ತದೆ ಎಂಬ ಕಾರಣಕ್ಕಾಗಿ ಯುವತಿಯರ ಕೋರಿಕೆಯನ್ನು ವಿರೋಧಿಸಿದರು.