
ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಹೀಗಿದ್ದರೂ ಮಹಿಳೆಯರಿಬ್ಬರು ಒಂದೇ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಹುಬ್ಬಳ್ಳಿಯ ನೇಕಾರ ನಗರದಿಂದ ಕಿಮ್ಸ್ ಮಾರ್ಗವಾಗಿ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಒಂದೇ ಆಧಾರ್ ಕಾರ್ಡ್ ನ ಎರಡು ಪ್ರತಿಗಳನ್ನು ತೋರಿಸಿ ಇಬ್ಬರು ಮಹಿಳೆಯರು ಪ್ರಯಾಣಿಸುವಾಗ ನಿರ್ವಾಹಕನ ಕೈಗೆ ಸಿಕ್ಕಿಬಿದ್ದಿದ್ದಾರೆ.
ಒಬ್ಬರು ಆಧಾರ್ ಕಾರ್ಡ್ ತೋರಿಸಿದರೆ ಮತ್ತೊಬ್ಬರು ಅದೇ ಆಧಾರ್ ಕಾರ್ಡ್ ನ ಕಲರ್ ಜೆರಾಕ್ಸ್ ಪ್ರತಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ಬಗ್ಗೆ ನಿರ್ವಾಹಕ ಪ್ರಶ್ನಿಸಿದಾಗ ತಬ್ಬಿಬ್ಬಾಗಿದ್ದು, ವಿಡಿಯೋ ವೈರಲ್ ಆಗಿದೆ.