
ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ಕುದಿಯುತ್ತಿದ್ದ ಸಾಂಬಾರ್ ಮೈಮೇಲೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿದೆ.
ಚೌಡೇಶ್ ಮತ್ತು ರಾಧಾ ದಂಪತಿಯ ಪುತ್ರ ಧನ್ವಿಕ್ ಸಾವಿಗೀಡಾದ ಮಗು ಎಂದು ಹೇಳಲಾಗಿದೆ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಮಗು ಅಡುಗೆ ಮನೆಗೆ ಬಂದಿದ್ದು, ಸ್ಟೌ ಮೇಲೆ ಇದ್ದ ಬಿಸಿ ಸಾಂಬಾರ್ ಪಾತ್ರೆಯನ್ನು ಎಳೆದಿದೆ. ಈ ವೇಳೆ ಪಾತ್ರೆಯಲ್ಲಿದ್ದ ಬಿಸಿ ಸಾಂಬಾರ್ ಮಗುವಿನ ಮೈಮೇಲೆ ಬಿದ್ದು ಗಾಯಗೊಂಡಿದ್ದು, ಚನ್ನಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.