ನಟ ನಾಗಚೈತನ್ಯ ನಿಶ್ಚಿತಾರ್ಥದ ನಂತ್ರ ನಟಿ ಸಮಂತಾ ರೂತ್ ಮತ್ತೆ ಸುದ್ದಿಯಲ್ಲಿದ್ದಾರೆ. ನಾಗಚೈತನ್ಯ ನಿಶ್ಚಿತಾರ್ಥದ ಬಗ್ಗೆ ಸಮಂತಾ ಏನು ಹೇಳ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡದ ಸಮಂತಾ ಈಗ ಸೆಲ್ಫಿ ಪೋಸ್ಟ್ ಮಾಡಿದ್ದಾರೆ.
ಸಮಂತಾ ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. ಸಮಂತಾ ಹಂಚಿಕೊಂಡಿರುವ ಫೋಟೋದಲ್ಲಿ ಅವರು ಕಾರಿನಲ್ಲಿ ಕುಳಿತಿರುವುದು ಕಂಡುಬಂದಿದೆ. ಕಂದು ಬಣ್ಣದ ಹೂಡಿ ಧರಿಸಿರುವ ಸಮಂತಾ, ಕಪ್ಪು ಗ್ಲಾಸ್ ಹಾಕಿದ್ದಾರೆ. ಹಣೆಯ ಮೇಲೆ ಎರಡು ಬೆರಳುಗಳನ್ನು ಇಟ್ಟು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಶಾಂತಿ ಮತ್ತು ಸ್ಥಿರತೆಯ ವಸ್ತುಸಂಗ್ರಹಾಲಯ ಎಂದು ಅವರ ಟೀ ಶರ್ಟ್ ಮೇಲೆ ಬರೆಯಲಾಗಿದೆ. ಸಮಂತಾ @samantharuthprabhuoffl ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಮಂತಾ ಈ ಪೋಸ್ಟ್ ಗೆ ಅಭಿಮಾನಿಗಳು ಕಮೆಂಟ್ ಸುರಿಮಳೆಗೈದಿದ್ದಾರೆ. ಸಮಂತಾ ಇದನ್ನು ಯಾರಿಗೆ ಹೇಳ್ತಿದ್ದಾರೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅವರಿಗೆ ಈಗ ನೆಮ್ಮದಿ ಸಿಕ್ಕಿದೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ಸಮಂತಾ ಮತ್ತು ನಾಗ ಚೈತನ್ಯ ದೀರ್ಘಕಾಲ ಡೇಟಿಂಗ್ ನಂತ್ರ ಅಕ್ಟೋಬರ್ 6 , 2017 ರಂದು ಗೋವಾದಲ್ಲಿ ಮದುವೆ ಆಗಿದ್ದರು. ಸಮಂತಾ ಮತ್ತು ನಾಗ ಚೈತನ್ಯ 2021 ರಲ್ಲಿ ವಿಚ್ಛೇದನ ಪಡೆದ್ರು. ವಿಚ್ಛೇದನ ಪಡೆದ 3 ವರ್ಷಗಳ ನಂತ್ರ, ನಾಗ ಚೈತನ್ಯ ಆಗಸ್ಟ್ 8 ರಂದು ನಟಿ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.