ಸಾಮಾಜಿಕ ಜಾಲತಾಣಗಳಲ್ಲಿರುವ ತಮ್ಮ ಪ್ರೊಫೈಲ್ನಲ್ಲಿ ’ಜೋನಾಸ್’ ಸರ್ ನೇಮ್ ತೆಗೆದುಹಾಕಿದ ಕಾರಣಕ್ಕೆ ಮಾಧ್ಯಮಗಳಲ್ಲಿ ಬಹಳ ಕುತೂಹಲ ಸೃಷ್ಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ನಟಿ ಪ್ರಿಯಾಂಕಾ ಚೋರಾ ಜೋನಾಸ್, ಹೊಸ ಪೋಸ್ಟ್ ಒಂದನ್ನು ಹಾಕಿ ರೋಸ್ಟ್ ಮಾಡಿದ್ದಾರೆ.
ನವೆಂಬರ್ 23ರಂದು ನೆಟ್ಫ್ಲಿಕ್ಸ್ನಲ್ಲಿ ಬಿತ್ತರಗೊಂಡ ’ದಿ ಜೋನಾಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್’ ಎಂಬ ಹೆಸರಿನ ರೋಸ್ಟಿಂಗ್ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಪ್ರಿಯಾಂಕಾ ಚೋಪ್ರಾ, “ನನ್ನ ಪತಿ ಹಾಗೂ ಆತನ ಸ್ನೇಹಿತರಿಗೆ ಡಿನ್ನರ್ಗೆ ಒಳ್ಳೆಯ ರೋಸ್ಟ್ ತಂದಿದ್ದೇನೆ. ಜೋನಾಸ್ ಆಗಿರುವ ಕಾರಣಕ್ಕೆ ಸಿಗುವ ಪ್ರಯೋಜನಗಳಲ್ಲಿ ಒಂದು,” ಎಂದು ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟುಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.
ಪ್ರೀತಿಸಿ ಮದುವೆಯಾಗುವ ಹುಡುಗಿಯರಿಗೊಂದು ಸಂದೇಶ….! ಆಕೆ ಆತ್ಮಹತ್ಯೆ ಪತ್ರದಲ್ಲಿತ್ತು ಈ ವಿಷಯ
“ಹಾಯ್, ನಾನು ಇಂದು ಸಂಜೆ ನನ್ನ ಪತಿ ನಿಕ್ ಜೋನಾಸ್ ಹಾಗೂ ನನಗೆ ಹೆಸರುಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವ ಆತನ ಸಹೋದರರನ್ನು ರೋಸ್ಟ್ ಮಾಡಲು ಬಂದಿರುವುದು ಬಹಳ ಥ್ರಿಲ್ ಎನಿಸಿದೆ,” ಎಂದು ಆ ಕ್ಲಿಪ್ನ ಟೀಸರ್ನಲ್ಲಿ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ತಮ್ಮ ಹೆಸರನ್ನು ಪ್ರಿಯಾಂಕಾ ಚೋಪ್ರಾ ಜೋನಾಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಇಟ್ಟುಕೊಂಡಿರುವ ಪ್ರಿಯಾಂಕಾ ಚೋಪ್ರಾ, ’ಜೋನಾಸ್’ ಹೆಸರನ್ನು ತೆಗೆದು ಹಾಕಿದ್ದು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿ, ಎಲ್ಲೋ ಈ ದಂಪತಿಯ ನಡುವೆ ಬಿರುಕು ಬಿಟ್ಟಿರಬೇಕು ಎಂದುಕೊಂಡಿದ್ದರು.
ಪ್ರಿಯಾಂಕಾರ ಈ ಪೋಸ್ಟ್ಗೆ ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಪ್ರತಿಕ್ರಿಯಿಸಿದ್ದಾರೆ. ಟಾಲಿವುಡ್ ನಟ ನಾಗಚೈತನ್ಯರೊಂದಿಗೆ ದಾಂಪತ್ಯದಿಂದ ಬೇರ್ಪಟ್ಟ ಸಮಂತಾ, ವಿಚ್ಛೇದನದ ಘೋಷಣೆಗೂ ಮುನ್ನ ತಮ್ಮ ಹೆಸರಿನಲ್ಲಿದ್ದ ’ಅಕ್ಕಿನೇನಿ’ ಸರ್ ನೇಮ್ ಬದಲಿಸುವ ಮೂಲಕ ತಮ್ಮ ಹಾಗೂ ನಾಗಾರ್ಜುನ ಪುತ್ರನ ನಡುವಿನ ವಿರಸದ ಸುಳಿವು ನೀಡಿದ್ದರು.