ಹೊಸ ವರ್ಷಕ್ಕೆ ಮುನ್ನ ನಟಿ ಸಮಂತಾ ರುತ್ ಪ್ರಭು ಗೋವಾದಲ್ಲಿ ಮೋಜು ಮಸ್ತಿಯನ್ನು ಮುಂದುವರೆಸಿದ್ದಾರೆ. ಗೆಳತಿಯರೊಂದಿಗೆ ಪ್ರಕೃತಿಯ ಮಡಿಲಲ್ಲಿ ಮಗುವಾಗಿರುವ ಸಮಂತಾ ತನ್ನ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಇತ್ತೀಚೆಗೆ ಸಾಕಷ್ಟು ಪ್ರಯಾಣಿಸುತ್ತಿರುವ ಸಮಂತಾ, ತಮ್ಮ ಗೋವಾ ಟ್ರಿಪ್ ನಲ್ಲಿ ಮನಸ್ಪೂರ್ತಿಯಾಗಿ ನಕ್ಕು ನಲಿದಿದ್ದಾರೆ.
ಇದಕ್ಕೆ ಸಾಕ್ಷಿ ಆಕೆ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳು. ಸಮಂತಾ ಹಾಗೂ ಅವರ ಸ್ನೇಹಿತೆಯರು ಕಲರ್ ಫುಲ್ ಬಿಕಿನಿ ಧರಿಸಿ ಜಲಪಾತದಲ್ಲಿ ನಲಿಯುತ್ತಿರುವ ಚಿತ್ರಗಳನ್ನ ಕ್ಲಿಕ್ ಮಾಡಲಾಗಿದೆ. ತನ್ನ ಸ್ನೇಹಿತರೊಂದಿಗೆ, ಮಿಲಿಯನ್ ಡಾಲರ್ ಸ್ಮೈಲ್ ನೀಡಿರುವ ಸಮಂತಾ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಸಮಂತಾ ಸ್ನೇಹಿತೆ ಸುಂಕವಲ್ಲಿ ಪುಂಜ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಹೊಸ ಚಿತ್ರದಲ್ಲಿ, ನೀಲಿ ಬಣ್ಣದ ಮುದ್ರಿತ ಮೊನೊಕಿನಿಯಲ್ಲಿ ಮೇಕಪ್ ಇಲ್ಲದೆ ಚಿತ್ರಗಳಿಗೆ ಪೋಸ್ ನೀಡಿರುವ ಸಮಂತಾ ತುಂಬಾ ಸಂತೋಷ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. ನಟಿ ಸಮಂತಾ ತನ್ನ ಗೆಳತಿಯರಾದ ವಾಸುಕಿ ಹಾಗೂ ಶಿಲ್ಪಾ ರೆಡ್ಡಿ ಅವರೊಂದಿಗೆ ಗೋವಾ ಟ್ರಿಪ್ ಗೆ ತೆರಳಿದ್ದಾರೆ.
ಕೆಲವು ದಿನಗಳ ಹಿಂದೆ ಸಮಂತಾ ಹಂಚಿಕೊಂಡ ಅದೇ ವೆಕೇಷನ್ ನ ಮತ್ತೊಂದು ಚಿತ್ರದಲ್ಲಿ, ಸಮಂತಾ ಅದೇ ಬಿಕಿನಿಯನ್ನು ಧರಿಸಿ ನೀರಿನಲ್ಲಿ ನಲಿಯುತ್ತಿರುವುದನ್ನ ಕಂಡ ಅಭಿಮಾನಿಗಳು ಸಹ ಖುಷಿಪಟ್ಟಿದ್ದರು. ಇತ್ತೀಚೆಗೆ ತನ್ನ ವಿಚ್ಛೇದನದಿಂದಲೆ ಸುದ್ದಿಯಲ್ಲಿದ್ದ ಸಮಂತಾ ತನ್ನ ಜೀವನವನ್ನ ಹೀಗೆ ಸ್ನೇಹಿತರೊಂದಿಗೆ ಕಳೆಯುತ್ತಿರುವುದು ಅಭಿಮಾನಿಗಳಲ್ಲಿ ಸಮಾಧಾನ ಮೂಡಿಸಿದೆ.