ಬ್ಯಾಕ್ ಟು ಬ್ಯಾಕ್ ಹಿಟ್ ಗಳ ಮೂಲಕ ಸಖತ್ ಸುದ್ದಿಯಲ್ಲಿರುವ ಸಮಂತಾ ಬಗ್ಗೆ ಮತ್ತೊಂದು ವಿಷಯ ಚರ್ಚೆಯಾಗುತ್ತಿದೆ. ತನ್ನ ವೃತ್ತಿ ಜೀವನದ ಗ್ರಾಫ್ ಮೂಲಕ ಯುವ ನಟಿಯರಿಗೆ ಆದರ್ಶವಾಗಿರುವ ಸಮಂತಾ, ಸಂಭಾವನೆ ಹುಬ್ಬೇರುವಂತೆ ಮಾಡುವುದು ಖಂಡಿತಾ. ಹಾಗಾದ್ರೆ ಸಮಂತಾ ಒಂದು ಚಿತ್ರಕ್ಕೆ ಚಾರ್ಜ್ ಮಾಡುವುದೆಷ್ಟು?
ಮಾಜಿ ನಾಯಕನ ಮನೆಯೆದುರು ಆಪ್ ಸಂಭ್ರಮಾಚರಣೆ; ಕುಮಾರ್ ವಿಶ್ವಾಸ್ ನಿವಾಸದ ಬಳಿ ಸಿಹಿ ಹಂಚಿದ ನರೇಶ್ ಬಲ್ಯಾನ್
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವುದು ಹೊಸ ವಿಚಾರವಲ್ಲ. ಈಗ ಅದೇ ಸಾಲಿಗೆ ಸಮಂತಾ ಕೂಡ ಸೇರಿದ್ದಾರೆ. ಫ್ಯಾಮಿಲಿಮ್ಯಾನ್, ಪುಷ್ಪ ಡ್ಯಾನ್ಸ್ ನಂಬರ್ ನಿಂದ ಸಮಂತಾಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಮಂತಾ ತಮ್ಮ ಸಂಭಾವನೆ ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.
ಟಿವಿಎಸ್ ಸಾಧನೆಗೆ ಮತ್ತೊಂದು ಗರಿ; ʼಇಂಡಿಯನ್ ಮೋಟಾರ್ ಸೈಕಲ್ ಆಫ್ ದಿ ಇಯರ್ʼ ಪ್ರಶಸ್ತಿ ಪಡೆದ ರೈಡರ್ 125
ಸಮಂತಾ ಒಂದು ಚಿತ್ರಕ್ಕೆ ಅಥವಾ ಸ್ಪೆಷಲ್ ಅಪಿಯರೆನ್ಸ್ಗೆ 3 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ಅವರ ಸಂಭಾವನೆ ಈ ಎರಡು ನಂಬರ್ಸ್ ನಡುವೆ ಹೆಚ್ಚುಕಮ್ಮಿಯಾಗುತ್ತದೆ. ಪ್ರೊಡಕ್ಷನ್ ಹೌಸ್ ಸೇರಿದಂತೆ ಹಲವಾರು ವಿಷಯಗಳನ್ನು ಪರಿಗಣಿಸಿ ಸಮಂತಾ 3 ರಿಂದ 5 ಕೋಟಿ ಸಂಭಾವನೆ ಚಾರ್ಜ್ ಮಾಡುತ್ತಾರೆ.
ತನ್ನ 12 ವರ್ಷಗಳ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿರುವ ಸಮಂತಾ, ಮೊದಲು ಕಮರ್ಷಿಯಲ್ ಚಿತ್ರಗಳಲ್ಲಿ, ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಬುದ್ಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅಂದ ಹಾಗೇ ಪುಷ್ಪ ಚಿತ್ರದ ಸ್ಪೆಷಲ್ ನಂಬರ್ ಹೂಂ ಅಂಟಾವಾ ಹಾಡಿಗೆ ಸಮಂತಾ ಬರೋಬ್ಬರಿ ಐದು ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.