
ಟ್ವಿಟರ್ನಲ್ಲಿ ಬಿಜೆಪಿ ನಾಯಕ ಸಂಬಿತ್ ಪಾತ್ರಾ ಈ ಘಟನೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ತಾವು ಮಾಡಿದ ಈ ಅವಾಂತರದಿಂದ ಪಾರಾಗಲು ಜಯ ಹೇ, ಜಯ ಹೇ ಎಂದು ಹೇಳುವುದು ಉತ್ತಮ ಮಾರ್ಗ ಎಂದು ಇವರು ತಿಳಿದುಕೊಂಡಿದ್ದಾರೆ. ಸಮಾಜವಾದಿಗಳೇ ವ್ಹಾ..! ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋದಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ನ ಸಂಸದ ಹಸನ್ ಧ್ವಜಾರೋಹಣ ಮಾಡಿದ ಬಳಿಕ ತಮ್ಮ ಪಕ್ಷದ ಕಾರ್ಯಕರ್ತರ ಜೊತೆಯಲ್ಲಿ ರಾಷ್ಟ್ರಗೀತೆ ಹೇಳಲು ಆರಂಭಿಸಿದ್ದಾರೆ. ಆದರೆ ಮಧ್ಯದಲ್ಲಿ ಎಲ್ಲರೂ ರಾಷ್ಟ್ರಗೀತೆಯ ಸಾಲುಗಳನ್ನು ಮರೆತಿರೋದನ್ನು ಕಾಣಬಹುದಾಗಿದೆ.