ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಭರತ್ ಬಾಬು ನಿರ್ದೇಶನದ ‘ಸಲ್ಯೂಟ್’ ಚಿತ್ರದ ”ಮಜಾ ಮಜಾ” ಎಂಬ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
ಈ ಹಾಡಿಗೆ ರಿಷಿಕೇಶ್, ಕೀರ್ತನ್ ಮತ್ತು ಪುಷ್ಪ ಧ್ವನಿಯಾಗಿದ್ದು, ಮ್ಯಾನುಯೆಲ್ ಜಯಶೀಲ್ ಸಂಗೀತ ಸಂಯೋಜನೆ ನೀಡಿದ್ದಾರೆ. ಭರತ್ ಬಾಬು ಅವರ ಸಾಹಿತ್ಯವಿದೆ.
ಶ್ರೀ ಬಾಲಾಜಿ ಈಶ್ವರ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಮಾಸ್ಟರ್ ಪರಿಣಿತ್, ಶಿವ ಕಾರ್ತಿಕ್, ಪಕೀರಪ್ಪ ದೊಡ್ಡಮನಿ, ಶಿಲ್ಪ ನಾಯಕ್, ನವ್ಯಶ್ರೀ, ಗೀತಾ ಪುರುಷೋತ್ತಮ್, ಭರತ್ ಬಾಬು ತೆರೆ ಹಂಚಿಕೊಂಡಿದ್ದಾರೆ. ಚನ್ನಕೇಶ್ವರ ಛಾಯಾಗ್ರಹಣ, ಆರ್ಮುಗಂ ಸಾಹಸ ನಿರ್ದೇಶನ, ಪ್ರವೀಣ್ ನೃತ್ಯ ನಿರ್ದೇಶನವಿದೆ.