ಉಪ್ಪಿಲ್ಲದ ಊಟಕ್ಕೆ ರುಚಿಯಿಲ್ಲ. ಉಪ್ಪು ಅಡುಗೆ ಮನೆಯಲ್ಲಿರಲೇಬೇಕು. ಊಟದ ಬಾಳೆಲೆಗೆ ಮೊದಲು ಬಡಿಸುವ ಚಿಟಕಿ ಉಪ್ಪು ಕೇವಲ ಆಹಾರದ ರುಚಿ ಮಾತ್ರ ಹೆಚ್ಚಿಸೋದಿಲ್ಲ. ಬದಲಾಗಿ ಅದೃಷ್ಟವನ್ನು ಬದಲಿಸುವ ಶಕ್ತಿ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಮಸ್ಯೆ ಜಾಸ್ತಿ. ಎಷ್ಟು ಶ್ರಮ ವಹಿಸಿದ್ರೂ ಯಶಸ್ಸು ಸಿಗೋದಿಲ್ಲ. ಅಂಥವರ ಜೀವನದಲ್ಲಿ ಉಪ್ಪು ಚಮತ್ಕಾರ ಮಾಡುತ್ತದೆ.
ಗ್ಲಾಸಿನ ಪಾತ್ರೆಯಲ್ಲಿ ಚಿಟಕಿ ಉಪ್ಪು ಹಾಗೂ ನಾಲ್ಕು ಲವಂಗವನ್ನು ಹಾಕಿ. ಲವಂಗ ಮುರಿದಿರಬಾರದು. ಇದನ್ನು ಮನೆಯ ಯಾವುದೇ ಭಾಗದಲ್ಲಿ ಇಡಿ. ಉಪ್ಪು ಬಣ್ಣ ಬದಲಿಸುತ್ತಿದ್ದಂತೆ ಅದನ್ನು ಬದಲಾಯಿಸಿ. ಮನೆಯಲ್ಲಿ ಈ ಉಪಾಯ ಅನುಸರಿಸಿದ್ರೆ ಅನ್ನ ಹಾಗೂ ಧನದ ಸಮಸ್ಯೆ ಎಂದೂ ಎದುರಾಗುವುದಿಲ್ಲ.
ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ. ಕೆಲವೇ ದಿನಗಳಲ್ಲಿ ಇದ್ರ ಚಮತ್ಕಾರವನ್ನು ನೀವು ಗಮನಿಸಬಹುದು. ನಕಾರಾತ್ಮಕ ಶಕ್ತಿಯ ನಾಶವಾಗಿ ಆರೋಗ್ಯ ಸಮಸ್ಯೆ ಕೂಡ ಇರೋದಿಲ್ಲ.
ಮನೆಯ ಬಾತ್ ರೂಮಿನಲ್ಲಿ ವಾಸ್ತು ದೋಷವಿದ್ದರೆ ಯಾವುದಾದ್ರೂ ಪಾತ್ರೆಯಲ್ಲಿ ಉಪ್ಪನ್ನು ಹಾಕಿ ಯಾರ ಕಣ್ಣಿಗೂ ಸುಲಭವಾಗಿ ಕಾಣದ ಜಾಗದಲ್ಲಿಡಿ. ವಾರದಲ್ಲಿ ಒಂದು ಬಾರಿ ಉಪ್ಪನ್ನು ಬದಲಿಸುತ್ತಿರಿ.