alex Certify ‘ಮಸಾಜ್’ ಮಾಡುವಾಗ ಎಂಜಲು ಬಳಸಿದ ಕ್ಷೌರಿಕ; ಆಘಾತಕಾರಿ ವಿಡಿಯೋ ವೈರಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಸಾಜ್’ ಮಾಡುವಾಗ ಎಂಜಲು ಬಳಸಿದ ಕ್ಷೌರಿಕ; ಆಘಾತಕಾರಿ ವಿಡಿಯೋ ವೈರಲ್….!

ಉತ್ತರಪ್ರದೇಶದ ಕನೌಜ್‌ನಿಂದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ತಾಲ್ಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕ್ಷೌರಿಕನೊಬ್ಬ ಮಸಾಜ್ ಮಾಡುವಾಗ ಎಂಜಲು ಬಳಸಿದ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಕ್ಷೌರಿಕ, ಗ್ರಾಹಕನ ಮುಖಕ್ಕೆ ಮಸಾಜ್ ಮಾಡುತ್ತಿದ್ದಾನೆ. ಈ ಸಮಯದಲ್ಲಿ, ಅವನು ತನ್ನ ಕೈಯಲ್ಲಿ ಎರಡು ಬಾರಿ ಎಂಜಲು ಹಾಕುತ್ತಾನೆ. ಅದೇ ಕೈಯಿಂದ ಮಸಾಜ್‌ ಮಾಡುತ್ತಾನೆ. ಈ ಸಮಯದಲ್ಲಿ  ಕಣ್ಣು ಮುಚ್ಚಿದ್ದರಿಂದ ಗ್ರಾಹಕರಿಗೆ ಅದು ತಿಳಿಯುವುದಿಲ್ಲ.

ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಕನೌಜ್ ಪೊಲೀಸರು  ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತಾಳಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಕನೌಜ್ ಪೊಲೀಸರು ಬರೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...