ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪರಿಶೀಲನೆಗಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಅಧಿಕಾರಿಯೊಬ್ಬರು ತಡೆ ಹಿಡಿದಿದ್ದರು. ಹೀಗಾಗಿ ಈ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗಿದೆ ಅಂತೆಲ್ಲಾ ವರದಿಯಾಗಿತ್ತು. ಇದೀಗ ಕೊನೆಗೂ ಮೌನ ಮುರಿದಿರುವ ಸಿಐಎಸ್ಎಫ್, ಅಧಿಕಾರಿಯನ್ನು ಶಿಕ್ಷಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸಿಐಎಸ್ಎಫ್, “ಅಧಿಕಾರಿಗೆ ಶಿಕ್ಷೆಯಾಗಿಲ್ಲ. ಆದರೆ ಕರ್ತವ್ಯದಲ್ಲಿ ಅವರ ಸಮರ್ಪಣೆಗಾಗಿ ಪ್ರತಿಫಲ ನೀಡಲಾಗಿದೆ. ಅವರು ಸೂಕ್ತ ಬಹುಮಾನವನ್ನು ಪಡೆದಿದ್ದಾರೆ” ಎಂದು ಸ್ಪಷ್ಟನೆ ನೀಡಿದೆ.
ಆಹಾರ ತಿನ್ನುವಾಗ ಬಟ್ಟಲಿನಲ್ಲೇ ನಿದ್ರಿಸಿದ ಮುದ್ದಾದ ನಾಯಿಮರಿ: ವಿಡಿಯೋ ವೈರಲ್
ಇತ್ತೀಚೆಗೆ ‘ಟೈಗರ್ 3’ ಸಿನಿಮಾ ಚಿತ್ರೀಕರಣಕ್ಕಾಗಿ ನಟ ಸಲ್ಮಾನ್ ಖಾನ್, ನಟಿ ಕತ್ರೀನಾ ಕೈಫ್ ರಷ್ಯಾಕ್ಕೆ ಹಾರಿದ್ದರು. ಶೂಟಿಂಗ್ ಮುಗಿಸಿ ಸಲ್ಮಾನ್, ಕತ್ರೀನಾ ಮುಂಬೈಗೆ ಬಂದಿಳಿದಿದ್ದರು. ಸಲ್ಮಾನ್ ಪ್ರವೇಶದ ಗೇಟ್ಗೆ ಬರುತ್ತಿರುವಾಗ ಸಿಐಎಸ್ಎಫ್ ಯೋಧರೊಬ್ಬರು ಸಲ್ಮಾನ್ ಖಾನ್ರನ್ನು ವಿಚಾರಣೆಗೆಂದು ತಡೆದಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು.
https://www.youtube.com/watch?v=0kq5rfZ0Rgs&feature=youtu.be