
ನಟ ಸಲ್ಮಾನ್ ಖಾನ್ ಅವರ ಸಿಕ್ಸ್ ಪ್ಯಾಕ್ ನಿಜವಾದಲ್ಲಲ್ಲ, ವಿಷುಯಲ್ ಎಫೆಕ್ಟ್ ಎಂದು ಟ್ರೋಲ್ ಮಾಡಲಾಗ್ತಿತ್ತು. ಈ ವಿಚಾರದ ಬಗ್ಗೆ ಭಾಯಿಜಾನ್ ಟ್ರೋಲಿಗರಿಗೆ ಸಖತ್ತಾಗೇ ಉತ್ತರ ಕೊಟ್ಟಿದ್ದಾರೆ. ಅವರ ಮುಂಬರುವ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನ ಟ್ರೇಲರ್ ಲಾಂಚ್‌ನಲ್ಲಿ, ಸಲ್ಮಾನ್ ಖಾನ್ ತಮ್ಮ ಶರ್ಟ್ ಬಿಚ್ಚಿ ಸಿಕ್ಸ್ ಪ್ಯಾಕ್ ಅಸಲಿ ಎಂಬುದನ್ನ ತೋರಿಸಿದ್ದಾರೆ.
ಈವೆಂಟ್‌ನಲ್ಲಿ ತನ್ನ ಶರ್ಟ್ ಬಿಚ್ಚಿದ ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್ ಇರೋದು ನಿಜವೆಂದು ತೋರಿಸಿದ್ದಾರೆ. ಇದನ್ನು ವಿಎಫ್‌ಎಕ್ಸ್ ಮೂಲಕ ಮಾಡಲಾಗುತ್ತದೆ ಎಂದು ನೀವು ಭಾವಿಸುತ್ತೀರಾ ಎಂದು ಟ್ರೋಲಿಗರಿಗೆ ಟಾಂಗ್ ನೀಡಿದ್ದಾರೆ.