ಮೊಹಾಲಿ ಆರ್.ಪಿ.ಜಿ. ದಾಳಿಕೋರರ ಹಿಟ್ ಲಿಸ್ಟ್ ನಲ್ಲಿ ನಟ ಸಲ್ಮಾನ್ ಖಾನ್ ಇದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ಮೊಹಾಲಿಯಲ್ಲಿ ಗುಪ್ತಚರ ಘಟಕದ ಮೇಲೆ ನಡೆದ ಆರ್.ಪಿ.ಜಿ. ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರನ್ನು ದೆಹಲಿ ಪೊಲೀಸರು ಗುಜರಾತ್ನ ಜಾಮ್ ನಗರದಲ್ಲಿ ಬಂಧಿಸಿದ್ದಾರೆ.
ಬಾಲಾಪರಾಧಿಗಳ ಹಿಟ್ ಲಿಸ್ಟ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಇದ್ದರು. ನಟ ಸಲ್ಮಾನ್ ಖಾನ್ ಗೆ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬಾಲಾಪರಾಧಿಗೆ ಅಸೈನ್ ಮೆಂಟ್ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮೊಹಾಲಿ ಆರ್.ಪಿ.ಜಿ. ದಾಳಿಯ ಯೋಜನೆಯಲ್ಲಿ ಅವರು ಭಾಗಿಯಾಗಿದ್ದರಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ.
ಆರೋಪಿ ಅರ್ಶ್ದೀಪ್ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್ಐ) ಬೆಂಬಲದೊಂದಿಗೆ ಬಾಬರ್ ಖಾಲ್ಸಾ ಇಂಟರ್ನ್ಯಾಷನಲ್ ಜೊತೆ ಸಂಪರ್ಕದಲ್ಲಿದ್ದ. ತನಿಖೆಯಲ್ಲಿ, ಮೊಹಾಲಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಬಾಬರ್ ಖಾಲ್ಸಾ ಇಂಟರ್ನ್ಯಾಷನಲ್ ಎಂದು ಪೊಲೀಸರು ತೀರ್ಮಾನಿಸಿದ್ದಾರೆ.
ಏಪ್ರಿಲ್ 5 ರಂದು ಮಹಾರಾಷ್ಟ್ರದ ನಾಂದೇಡ್ನಲ್ಲಿ ಕೊಲ್ಲಲ್ಪಟ್ಟ ಬಿಲ್ಡರ್ ಸಂಜಯ್ ಬಿಯಾನಿ ಹತ್ಯೆಯಲ್ಲಿ, ಆಗಸ್ಟ್ 4, 2021 ರಂದು ಅಮೃತಸರದ ಖಾಸಗಿ ಆಸ್ಪತ್ರೆಯ ಹೊರಗೆ ದರೋಡೆಕೋರ ರಾಣಾ ಕಾಂಡೋವಾಲಿಯಾ ಹತ್ಯೆಯಲ್ಲಿ ಅಪ್ರಾಪ್ತ ವಯಸ್ಕ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ.