alex Certify ಮುಂಬೈ ಲೋಕಲ್ ಟ್ರೈನ್ ನಲ್ಲಿ ಡಾನ್ಸ್ ಮಾಡಿದ್ರಾ ಸಲ್ಮಾನ್ ಖಾನ್? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಲೋಕಲ್ ಟ್ರೈನ್ ನಲ್ಲಿ ಡಾನ್ಸ್ ಮಾಡಿದ್ರಾ ಸಲ್ಮಾನ್ ಖಾನ್? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

article-image

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಾರ್ವಜನಿಕರೆದುರು ಬಂದು ಡ್ಯಾನ್ಸ್ ಮಾಡ್ತಾರಾ ? ಅದ್ರಲ್ಲೂ ಮುಂಬೈ ಲೋಕಲ್ ರೈಲಿನಲ್ಲಿ ಡ್ಯಾನ್ಸ್ ಮಾಡ್ತಾರೆ ಅಂದ್ರೆ ಅಚ್ಚರಿಪಡ್ತೀರಾ? ಸಲ್ಮಾನ್ ಖಾನ್ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಸಮಯ ಕಳೆದಿದ್ದಾರಾ? ಎಂದೆನಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ಈ ವಿಡಿಯೋದಲ್ಲಿರುವುದು ಸಲ್ಮಾನ್ ಖಾನ್ ರಲ್ಲ. ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಜನಪ್ರಿಯ ಹಾಡೊಂದಕ್ಕೆ ರೈಲಿನಲ್ಲಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಥೇಟ್ ಸಲ್ಮಾನ್ ಖಾನ್ ರ ನೃತ್ಯ ಕೌಶಲ್ಯದಿಂದ ಸಲ್ಮಾನ್ ಅಭಿಮಾನಿಗಳನ್ನು ಆಕರ್ಷಿಸುವಂತೆ ಅವರು ಡ್ಯಾನ್ಸ್ ಮಾಡಿದ್ದಾರೆ.

ಮುಂಬೈ ಮೂಲದ ಪುಟವೊಂದು ಟ್ವಿಟರ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಮೂಲ ಡ್ಯಾನ್ಸ್ ಗಿಂತ ಇದು ಉತ್ತಮವಾಗಿದೆ ಎದು ಹಲವರು ವಿಡಿಯೋಗೆ ಕಮೆಂಟ್ ಮಾಡಿದ್ದು ವ್ಯಕ್ತಿಯ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...