alex Certify ʼಆಶಿಕಿʼ ನಾಯಕ ನಟನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದ್ದರು ಸಲ್ಮಾನ್ ; ‘ಸುಲ್ತಾನ್’ ವ್ಯಕ್ತಿತ್ವ ಹಾಡಿಹೊಗಳಿದ ರಾಹುಲ್ ರಾಯ್ ಸಹೋದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಶಿಕಿʼ ನಾಯಕ ನಟನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದ್ದರು ಸಲ್ಮಾನ್ ; ‘ಸುಲ್ತಾನ್’ ವ್ಯಕ್ತಿತ್ವ ಹಾಡಿಹೊಗಳಿದ ರಾಹುಲ್ ರಾಯ್ ಸಹೋದರಿ

ಆಶಿಕಿ ಚಿತ್ರದ ನಟ ರಾಹುಲ್ ರಾಯ್ ಅವರ ವೈದ್ಯಕೀಯ ವೆಚ್ಚ ಭರಿಸಿ ನಟ ಸಲ್ಮಾನ್ ಖಾನ್ ಸಹಾಯ ಮಾಡಿದ್ದರೆಂದು ರಾಹುಲ್ ಅವರ ಸೋದರಿ ಬಹಿರಂಗಪಡಿಸಿದ್ದಾರೆ. ರಾಹುಲ್ ರಾಯ್ 2020 ರಲ್ಲಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದಾಗ ಸಲ್ಮಾನ್ ಖಾನ್ ಬಿಲ್ ಕ್ಲಿಯರ್ ಮಾಡಿದ್ದರೆಂದು ತಿಳಿಸಿದ್ದಾರೆ.

ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ರಾಯ್ ಅವರ ಸಹೋದರಿ ಹರಿ ಮಾ ಪ್ರಿಯಾಂಕಾ ಅವರು ಸಲ್ಮಾನ್ ಖಾನ್ ಸಹಾಯವನ್ನ ಸ್ಮರಿಸಿಕೊಂಡಿದ್ದಾರೆ.

ವೈದ್ಯಕೀಯ ಬಿಲ್‌ ಮೊತ್ತ ಪಾವತಿಸಿದ ಸಲ್ಮಾನ್ ಖಾನ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವೈದ್ಯಕೀಯ ಬಿಲ್ ಬಾಕಿ ಇದ್ದಾಗ ಸಲ್ಮಾನ್ ಅದನ್ನು ಪಾವತಿ ಮಾಡಿದರು. ಆಸ್ಪತ್ರೆಯಲ್ಲಿದ್ದ ರಾಹುಲ್ ಗೆ ಸಲ್ಮಾನ್ ಖಾನ್ ಕರೆ ಮಾಡಿ ನಾನೇನಾದರೂ ಸಹಾಯ ಮಾಡಬಹುದಾ ಕೇಳಿ ಎಂದಿದ್ದರು. ಅದರಂತೆ ಅವರು ಮೆಡಿಕಲ್ ಬಿಲ್ ಪಾವತಿಸಿ ಅಕ್ಷರಶಃ ಸಹಾಯ ಮಾಡಿದರು ಎಂದಿದ್ದಾರೆ.

ಅತ್ಯಂತ ಸುಂದರವಾದ ವಿಷಯವೆಂದರೆ ಸಲ್ಮಾನ್ ಮಾಧ್ಯಮಗಳ ಮುಂದೆ ಅದರ ಬಗ್ಗೆ ಮಾತನಾಡಲಿಲ್ಲ. ಇದು ನಿಜವಾಗಿಯೂ ಅವರ ವ್ಯಕ್ತಿತ್ವ. ಸಲ್ಮಾನ್ ಖಾನ್ ನಡೆ ನನ್ನ ಹೃದಯವನ್ನು ಮುಟ್ಟಿತು. ಅವರು ಕೇವಲ ಕ್ಯಾಮೆರಾ ಮುಂದಿನ ಸ್ಟಾರ್ ಅಲ್ಲ ಎಂದು ಸಲ್ಮಾನ್ ಖಾನ್ ಸಹಾಯ ನೆನೆದು ಹೊಗಳಿದ್ದಾರೆ.

2020 ರಲ್ಲಿ LAC – ಲೈವ್ ದಿ ಬ್ಯಾಟಲ್ ಇನ್ ಕಾರ್ಗಿಲ್ ಚಿತ್ರದ ಚಿತ್ರೀಕರಣದ ವೇಳೆ ರಾಹುಲ್ ರಾಯ್ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದರು. ಅದರ ನಂತರ ಅವರನ್ನು ತಕ್ಷಣವೇ ವೊಕಾರ್ಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿದ್ದ ಅವರನ್ನು ಅಂತಿಮವಾಗಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...