alex Certify ಗೇಮ್‌ ವಿರುದ್ದ ನ್ಯಾಯಾಲಯಕ್ಕೆ ಮೊರೆ; ಕಾನೂನು ಹೋರಾಟದಲ್ಲಿ ಸಲ್ಮಾನ್​ ಖಾನ್​ಗೆ ಮುನ್ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಮ್‌ ವಿರುದ್ದ ನ್ಯಾಯಾಲಯಕ್ಕೆ ಮೊರೆ; ಕಾನೂನು ಹೋರಾಟದಲ್ಲಿ ಸಲ್ಮಾನ್​ ಖಾನ್​ಗೆ ಮುನ್ನಡೆ

ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ಲಭ್ಯವಿರುವ ಸೆಲ್ಮೋನ್​ ಭೋಯ್​ ಎಂಬ ಹೆಸರಿನ ಗೇಮ್​ ವಿರುದ್ಧ ಬಾಲಿವುಡ್​ ನಟ ಸಲ್ಮಾನ್​ ಖಾನ್​​ ಕಾನೂನು ಹೋರಾಟಕ್ಕೆ ಇಳಿದಿದ್ದರು.

ಈ ಗೇಮ್​ 2002ರಲ್ಲಿ ನಡೆದಿದ್ದ ಸಲ್ಮಾನ್​ ಖಾನ್​​​ರ ಹಿಟ್​ & ರನ್​ ಕೇಸ್​ ಆಧರಿಸಿ ನಿರ್ಮಿಸಲಾಗಿದೆ. ದೇಶಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಈ ಪ್ರಕರಣದಿಂದ 2015ರಲ್ಲಿ ಸಲ್ಮಾನ್​ ಖಾನ್​ ಆರೋಪ ಮುಕ್ತರಾಗಿದ್ದರು. ಇದೀಗ ಸಲ್ಮಾನ್​​ ಖಾನ್​ ಮೊಕದ್ದಮೆ ಆಧರಿಸಿ ಈ ಗೇಮ್​ಗೆ ಮುಂಬೈ ಸಿವಿಲ್​ ಕೋರ್ಟ್​ ತಾತ್ಕಾಲಿಕ ನಿರ್ಬಂಧ ಹೇರಿದೆ.

ವರದಿಗಳ ಪ್ರಕಾರ, ಸೆಲ್ಮೋನ್​ ಭೋಯ್​ ಗೇಮ್​ ನಿರ್ಮಾತೃ ಕಂಪನಿಯಾದ ಪರೋಡಿ ಸ್ಟುಡಿಯೋಸ್​ ಪ್ರೈವೇಟ್​ ಲಿಮಿಟೆಡ್ ಗೆ,​​ ಸಲ್ಮಾನ್​ ಖಾನ್​ಗೆ ಸಂಬಂಧಿಸಿದ ಗೇಮ್​ ರಚನೆ, ಅಭಿವೃದ್ಧಿ ಅಥವಾ ಮರುಸೃಷ್ಠಿ ಮಾಡದಂತೆ ಆದೇಶ ನೀಡಿದೆ. ಗೂಗಲ್​ ಪ್ಲೇ ಸೇರಿದಂತೆ ಇತರೆ ಯಾವುದೇ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಈ ಗೇಮ್​ ಇಡದಂತೆ ಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ.

ಸೆಲ್ಮೋನ್​ ಭೋಯ್​ ವಿರುದ್ಧ ಆಗಸ್ಟ್​ ತಿಂಗಳಲ್ಲಿ ಕಾನೂನು ಹೋರಾಟಕ್ಕೆ ಸಲ್ಮಾನ್​ ಖಾನ್​ ಮುಂದಾಗಿದ್ದರು. ಈ ಗೇಮ್​​ ತಮ್ಮ ಚಾರಿತ್ರ್ಯ ವಧೆ ಮಾಡುತ್ತಿದೆ. ಈ ಗೇಮ್​ನಲ್ಲಿರುವ ಫೋಟೋಗಳು ಹಾಗೂ ಗೇಮ್​ನ ರೀತಿ ತಮಗೆ ಸಂಬಂಧಿಸಿದೆ ಎಂದು ಆರೋಪ ಮಾಡಿದ್ದರು.

ಸಲ್ಮಾನ್​ ಖಾನ್​ ದೂರಿನ ಬಳಿಕ ಗೇಮ್​ ಹಾಗೂ ಅದರಲ್ಲಿ ಬರುವ ಫೋಟೋ ಹಾಗೂ ಸನ್ನಿವೇಶಗಳನ್ನು ವೀಕ್ಷಿಸಿದ ಕೋರ್ಟ್​ ದೂರುದಾರ ಸಲ್ಮಾನ್​ ಖಾನ್​ಗೂ ಈ ಗೇಮ್​ಗೂ ಸಂಬಂಧ ಇರುವಂತೆ ಕಾಣುತ್ತಿದೆ ಎಂದು ಹೇಳಿದೆ.

ಗೇಮ್​ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಿದ ಸಿವಿಲ್​ ಕೋರ್ಟ್​, ಸಲ್ಮಾನ್​ ಖಾನ್​ ಒಪ್ಪಿಗೆ ಪಡೆಯದೇ ಈ ರೀತಿಯ ಗೇಮ್​ ನಿರ್ಮಾಣ ಮಾಡಲು ಸಾಧ್ಯವಿಲ್ಲ. ದೂರುದಾರ ವ್ಯಕ್ತಿಯ ಅನುಮತಿ ಇಲ್ಲದೇ ಅವರ ಫೋಟೋವನ್ನು ಹೋಲುವಂತಹ ಗೇಮ್​ನ್ನು ಅಭಿವೃದ್ಧಿ ಮಾಡಬಾರದು. ಇದು ಅವರ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...