ಕೊರೊನಾ ಸಾಂಕ್ರಾಮಿಕದಿಂದಾಗಿ ಸ್ಥಗಿತಗೊಂಡಿದ್ದ ‘ಟೈಗರ್ -3 ‘ ಹಿಂದಿ ಸಿನಿಮಾದ ಶೂಟಿಂಗ್ ರಷ್ಯಾದಲ್ಲಿ ಆರಂಭಗೊಳ್ಳುತ್ತಿದೆ. ಗುಪ್ತಚರ ಅಧಿಕಾರಿಗಳ ರೋಚಕ ಕಥೆಯಾಗಿರುವ ಈ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ವಿದೇಶದಲ್ಲಿ ನಡೆಸಲಾಗುತ್ತಿದೆ.
ಕಿಟಕಿ ಮೂಲಕ ಕೋವಿಡ್ ಲಸಿಕೆ ಪಡೆದ ಭೂಪ….!
ಚಿತ್ರದ ಹೀರೋ-ಹೀರೋಯಿನ್ಗಳಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯು ಶೂಟಿಂಗ್ಗಾಗಿ ಆ.18 ರಂದು ರಷ್ಯಾಗೆ ವಿಮಾನ ಏರಲಿದೆ. ಬಳಿಕ ಆಸ್ಟ್ರಿಯಾ ಮತ್ತು ಟರ್ಕಿಯಲ್ಲಿ ಕೂಡ ಹಲವು ದೃಶ್ಯಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಮ್ಸ್ ಹೇಳಿಕೊಂಡಿದೆ.
ಸಿನಿಮಾದ ನಿರ್ದೇಶನದ ಹೊಣೆಯನ್ನು ಮನೀಶ್ ಶರ್ಮಾ ಹೊತ್ತಿದ್ದಾರೆ. 2012ರಲ್ಲಿ ಏಕ್ ಥಾ ಟೈಗರ್ ಬಿಡುಗಡೆಯಾಗಿ ಅಪಾರ ಜನಮನ್ನಣೆ ಗಳಿಸಿತ್ತು. ನಂತರ ಅದರ ಮುಂದುವರಿದ ಭಾಗ ಎನ್ನಲಾದ ‘ಟೈಗರ್ ಜಿಂದಾ ಹೈ’ ಸಿನಿಮಾ 2017ರಲ್ಲಿ ಅಲಿ ಅಬ್ಬಾಸ್ ಝಫರ್ ನಿರ್ದೇಶನದಲ್ಲಿ ತೆರೆಕಂಡಿತು. ಇದು ನಿರೀಕ್ಷಿತ ಜನಪ್ರಿಯತೆ ಗಳಿಸಲಿಲ್ಲ.