ಬಾಲಿವುಡ್ ಭಾಯ್ಜಾನ್ ಅಂದ್ರೆ ಸಾಕು ಎಲ್ಲರಿಗೂ ತಕ್ಷಣವೇ ನೆನಪಾಗೋದು ಸಲ್ಮಾನ್ಖಾನ್. ಒಂದಕ್ಕಿಂತ ಒಂದು ಹಿಟ್, ಸೂಪರ್ ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ಕ್ರೆಡಿಟ್ ಇವರ ಹೆಸರಲ್ಲಿದೆ. ಇಂದು ಸಲ್ಮಾನ್ ಖಾನ್ ಬಳಿ ನೇಮ್ ಫೇಮ್ ಎಲ್ಲವೂ ಇದೆ. ಆದರೆ ಇದೇ ಸಲ್ಮಾನ್ ಖಾನ್ ಸಿನೆಮಾ ಇಂಡಸ್ಟ್ರಿಗೆ ಬಂದಾಗ ಕೆಲಸವೇ ಇಲ್ಲದೇ ಪರದಾಡಿದ್ದೂ ಉಂಟು. ಆ ದಿನಗಳನ್ನ ನೆನಸಿಕೊಂಡು ಸಲ್ಮಾನ್ಖಾನ್ ಕಣ್ಣೀರು ಹಾಕಿದರು.
`ಮೈನೆ ಪ್ಯಾರ್ ಕಿಯಾ` (Maine Pyar Kiya) ಸಲ್ಮಾನ್ ನಟನೆಯ ಮೊಟ್ಟ ಮೊದಲ ಸೂಪರ್ಹಿಟ್ ಸಿನೆಮಾ. ಒಂದು ಸೂಪರ್ ಹಿಟ್ ಸಿನೆಮಾ ಕೊಟ್ಟರೂ, ಈ ಸಿನೆಮಾದ ನಂತರ ಸಲ್ಮಾನ್ ಖಾನ್ ಬಳಿ ಯಾವುದೇ ಸಿನೆಮಾ ಪ್ರಾಜೆಕ್ಟ್ ಇರಲಿಲ್ಲ. ಇದರಿಂದ ಎಷ್ಟೋ ತಿಂಗಳು ಮನೆಯಲ್ಲಿ ಖಾಲಿ ಕುಳಿತುಕೊಳ್ಳೊ ಹಾಗಾಗಿತ್ತು.
ಅದಕ್ಕೂ ಮುಂಚೆ ಸಲ್ಮಾನ್ ನಟನೆಯ `ಬಿವಿ ಹೋತೋ ಐಸಿ`(Biwi Ho To Aisi) ಸಿನೆಮಾ 1988 ರಲ್ಲಿ ರಿಲೀಸ್ ಆಗಿತ್ತು. ಆ ಸಿನೆಮಾದಲ್ಲಿ ನಟಿ ರೇಖಾ ಮತ್ತು ನಟ ಫಾರೂಖ್ ಶೇಖ್ ಮುಖ್ಯ ಕಲಾವಿದರಾಗಿದ್ದರು. ಇದರಲ್ಲಿ ಸಲ್ಮಾನ್ ಪಾತ್ರ ಚಿಕ್ಕದಾಗಿತ್ತು. ಈ ಸಿನೆಮಾ ನಂತರ ಬಂದ ಸಿನೆಮಾ ಅಂದರೆ 1989 ರಲ್ಲಿ `ಮೈನೆ ಪ್ಯಾರ್ ಕಿಯಾ` ಈ ಸಿನೆಮಾದಲ್ಲಿ ಸಲ್ಮಾನ್ ಹಿರೋ ಆಗಿ ತೆರೆಮೇಲೆ ಮಿಂಚಿದರು. ಇದೇ ಸಿನೆಮಾದಲ್ಲಿ ನಾಯಕ ಸಲ್ಮಾನ್ಖಾನ್ಗೆ ನಾಯಕಿಯಾಗಿದ್ದರು ಭಾಗ್ಯಶ್ರೀ. ಸಲ್ಮಾನ್ಖಾನ್ ಮತ್ತು ಭಾಗ್ಯಶ್ರಿ ಜೋಡಿಯನ್ನ ಸಿನಿಪ್ರೇಕ್ಷಕ ತುಂಬು ಹೃದಯದಿಂದ ಒಪ್ಪಿಕೊಂಡಿದ್ದ. ಸಿನೆಮಾ ಒಂದು ಹಿಟ್ ಆದರೂ ಸಲ್ಮಾನ್ಖಾನ್ಗೆ ಕೆಲ ತಿಂಗಳುಗಳವರೆಗೆ ಒಂದೇ ಒಂದು ಸಿನೆಮಾ ಕೂಡಾ ಸಿಕ್ಕಿರಲಿಲ್ಲ. ಅದನ್ನೇ ಐಫಾ ಇವೆಂಟ್ ಕಾರ್ಯಕ್ರಮದಲ್ಲಿ ನೆನಸಿಕೊಂಡು ಭಾವುಕರಾದರು.
BIG NEWS: ಕಾಂಗ್ರೆಸ್ ನವರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಕರೆ; ಅವರು ಇಂತ ಕೆಲಸವನ್ನೇ ಮಾಡಿಕೊಂಡಿರಲಿ; ಕೈ ನಾಯಕರಿಗೆ ಟಾಂಗ್ ನೀಡಿದ ಸಿ.ಟಿ.ರವಿ
ಭಾಗ್ಯಶ್ರೀ `ಮೈನೆ ಪ್ಯಾರ್ ಕಿಯಾ` ಸಿನೆಮಾ ನಂತರ ಸಿನೆಮಾ ಜಗತ್ತಿಗೆನೇ ಬಾಯ್-ಬಾಯ್ ಹೇಳೊದಕ್ಕೆ ನಿರ್ಧಾರ ಮಾಡಿದ್ದರು. ಯಾಕಂದ್ರೆ ಆ ಸಮಯದಲ್ಲಿ ಭಾಗ್ಯಶ್ರೀ ಮದುವೆ ಆಗೋದಾಗಿ ನಿರ್ಧರಿಸಿದ್ದರು. ಅದಲ್ಲದೇ `ಮೈನೆ ಪ್ಯಾರ್ ಕಿಯಾ` ಸಿನೆಮಾದ ಸಂಪೂರ್ಣ ಕ್ರೆಡಿಟ್ ಭಾಗ್ಯಶ್ರೀ ಅವರಿಗೆನೇ ಸಿನಿಪ್ರೇಕ್ಷಕ ಕೊಟ್ಟಿದ್ದ. ಇದೆಲ್ಲದರ ಪರಿಣಾಮ ಸಲ್ಮಾನ್ ಖಾನ್ ಅವರ ಸಿನಿ ಕೆರಿಯರ್ ಮೇಲಾಗಿತ್ತು. ಆಗ ಸಲ್ಮಾನ್ ಜೀವನದಲ್ಲಿ ದೇವತಾ ಮನುಷ್ಯರಾಗಿ ಬಂದಿದ್ದು ರಮೇಶ್ ತೌರಾನಿ. ಅದೇ ಸಮಯದಲ್ಲಿ ಸಲ್ಮಾನ್ ತಂದೆ 2 ಸಾವಿರ ರೂಪಾಯಿ ಪ್ರೊಡ್ಯೂಸರ್ ಜಿ.ಪಿ. ಸಿಪ್ಪಿಯವರಿಗೆ ಕೊಟ್ಟು ಒಂದು ಮ್ಯಾಗ್ಜಿನ್ನಲ್ಲಿ ಸಲ್ಮಾನ್ ಜೊತೆ ಹೊಸ ಸಿನೆಮಾ ಮಾಡಲಿದ್ದೇನೆ ಅನ್ನೊ ಸುಳ್ಳು ಸುದ್ದಿ ಕೊಡಲು ಹೇಳಿದ್ದರು.
ಜಿ.ಪಿ. ಸಿಪ್ಪಿಯವರು ಸಲ್ಮಾನ್ ತಂದೆ ಹೇಳಿದಂತೆಯೇ ಮಾಡಿದ್ದರು. ಆದರೆ ಅವರು ಸಲ್ಮಾನ್ ಜೊತೆ ಯಾವುದೇ ಸಿನೆಮಾವನ್ನ ಮಾಡಬೇಕು ಅನ್ನೊ ನಿರ್ಧಾರ ಕೊನೆಗೂ ಮಾಡಿರ್ಲಿಲ್ಲ. ಆದರೆ ರಮೇಶ್ ತೌರಾನಿಯವರು, ಜಿ.ಪಿ. ಸಿಪ್ಪಿಯವರ ಕಚೇರಿಗೆ ಹೋಗಿ ಅವರ ಹೊಸ ಚಿತ್ರದ ಸಂಗೀತಕ್ಕಾಗಿ 5 ಲಕ್ಷ ರೂಪಾಯಿಯನ್ನ ಅಡ್ವಾನ್ಸ್ ಕೊಟ್ಟು ಬಂದರು. ಅದೇ 5 ಲಕ್ಷ ರೂ.ಯಿಂದಾಗಿಯೇ ಸಲ್ಮಾನ್ಖಾನ್ಗೆ `ಪತ್ತರ್ ಕೆ ಫುಲ್` ಅನ್ನೊ ಸಿನೆಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಅವರಿಗೆ ಧನ್ಯವಾದಗಳನ್ನ ಅರ್ಪಿಸಿದರು.
ಇದೇ ಕಾರ್ಯಕ್ರಮದಲ್ಲಿ ಸಲ್ಮಾನ್ ಅವರು ತಾವು ಎಂತೆಂಥ ಕಷ್ಟದ ದಿನಗಳನ್ನ ಎದುರಿಸಿದ್ದೇನೆ ಅನ್ನೋದನ್ನ ಹೇಳಿದ್ದರು. ಒಂದು ಸಮಯದಲ್ಲಿ ತಮ್ಮ ಬಳಿ ಶರ್ಟ್, ಪರ್ಸ್ ತೆಗೆದುಕೊಳ್ಳೊದಕ್ಕೂ ದುಡ್ಡು ಇರಲಿಲ್ಲ. ಆ ಸಮಯದಲ್ಲಿ ನಟ ಸುನಿಲ್ ಶೆಟ್ಟಿ ಖರೀದಿಸಿ ನನಗೆ ಉಡುಗೊರೆಯಾಗಿ ಕೊಟ್ಟಿದ್ದ. ಇನ್ನು ಬೋನಿ ಕಪೂರ್ ಅವರು ನನಗೆ `ವಾಂಟೆಡ್` ಅಂತಹ ಸೂಪರ್ ಹಿಟ್ ಸಿನಮಾ ಕೊಟ್ಟು ನನ್ನ ಸಿನಿ ಕೆರಿಯರ್ ಮುಳುಗದಂತೆ ನೋಡಿಕೊಂಡಿದ್ದರು ಅಂತ ಈ ಸಂದರ್ಭದಲ್ಲಿ ಹಳೆಯ ದಿನಗಳನ್ನ ನೆನಸಿಕೊಂಡು ಅವರಿಗೆಲ್ಲ ಧನ್ಯವಾದ ಹೇಳಿದರು.
ಸುಮಾರು 34 ವರ್ಷಗಳನ್ನ ಬಾಲಿವುಡ್ ಸಿನೆಮಾ ಜಗತ್ತಿನಲ್ಲಿ ಕಳೆದಿರೋ ಸಲ್ಮಾನ್ ಖಾನ್, ಅನೇಕ ಹಿಟ್ ಸಿನೆಮಾಗಳನ್ನ ಕೊಟ್ಟಿದ್ದಾರೆ. ಕೆಲ ಸಿನೆಮಾಗಳಂತೂ ದಾಖಲೆಗಳನ್ನೇ ಸೃಷ್ಟಿಸಿಬಿಟ್ಟಿವೆ. ಈಗ ಸಲ್ಮಾನ್ ಖಾನ್ `ಟೈಗರ್-3` ಮತ್ತು `ಪಠಾಣ್’ `ಕಭೀ ದರ್ದ್ ಕಭೀ ದವಾಯಿ` ಮತ್ತು `ಗಾಡ್ ಫಾದರ್` ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.