
ಇತ್ತೀಚಿನ ದಿನಗಳಲ್ಲಿ ಹೃದಯಘಾತಕ್ಕೆ ಚಿಕ್ಕ ವಯಸ್ಸಿನವರು ಬಲಿಯಾಗುತ್ತಿರುವ ಘಟನೆ ಅಘಾತ ಹುಟ್ಟಿಸುವಂತಿದೆ. ಅದರಲ್ಲೂ ಜಿಮ್ ನಲ್ಲಿ ವರ್ಕೌಟ್ ಮಾಡಿ ಕಟ್ಟುಮಸ್ತಾದ ದೇಹದಾರ್ಢ್ಯ ಹೊಂದಿರುವವರೇ ಸಾವನ್ನಪ್ಪಿರುವುದು ನಿಜಕ್ಕೂ ಶಾಕಿಂಗ್ ಸಂಗತಿ.
ಕೆಲ ದಿನಗಳ ಹಿಂದಷ್ಟೇ ಕುಸ್ತಿಪಟು ಒಬ್ಬರು ವಾಕ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಕುಸಿದು ಬಿದ್ದು ಕೋಮಾವಸ್ಥೆ ತಲುಪಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದರು. ಇದೀಗ ಬಾಲಿವುಡ್ ನ ಮತ್ತೊಬ್ಬ ನಟ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಅವರ ಡೂಪ್ಲಿಕೇಟ್ ಆಗಿ ಸಾಹಸ ದೃಶ್ಯಗಳಲ್ಲಿ ಸಲ್ಮಾನ್ ಬದಲಿಗೆ ಕಾಣಿಸಿಕೊಳ್ಳುತ್ತಿದ್ದ ನಟ ಸಾಗರ್ ಪಾಂಡೆ ವಿಧಿವಶರಾಗಿದ್ದಾರೆ. ಜಿಮ್ ನಲ್ಲಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು. ಸಾಗರ್ ಪಾಂಡೆ ನಿಧನಕ್ಕೆ ಸಲ್ಮಾನ್ ಖಾನ್ ಸಂತಾಪ ಸೂಚಿಸಿದ್ದಾರೆ.

