ಅಮಿತಾಬ್ ಬಚ್ಚನ್‌ರ ಹಾದಿಯಲ್ಲಿ ಕಾಲಿಟ್ಟಿರುವ ಸಲ್ಮಾನ್ ಖಾನ್, ಎನ್‌ಎಫ್‌ಟಿ (ನಾನ್-ಫಂಜಿಬಲ್ ಟೋಕನ್) ಸಂಗ್ರಹವನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಎನ್.ಎಫ್.ಟಿ. ಕ್ರೇಜ಼್ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಟ್ವಿಟರ್ ಮೂಲಕ ತಮ್ಮ ಎನ್.ಎಫ್.ಟಿ. ಸಂಗ್ರಹದ ಬಗ್ಗೆ ಮಾತನಾಡಿದ ಸಲ್ಮಾನ್, “ಎನ್.ಎಫ್.ಟಿ.ಯೊಂದಿಗೆ ನಾನು ಬರುತ್ತಿದ್ದೇನೆ. ಸಲ್ಮಾನ್ ಖಾನ್ ಸ್ಟಾಟಿಕ್ ಎನ್.ಎಫ್.ಟಿ.ಗಳು ಬಾಲಿಕಾಯಿನ್.ಕಾಮ್‌ನಲ್ಲಿ ಬರಲಿವೆ. ಭಾಯ್ ಲೋಗ್ ಟ್ಯೂನ್ಡ್ ಆಗಿರಿ! http://bollycoin.com #BollyCoin #NFTs #ComingSoon,” ಎಂದು ಟ್ವೀಟ್ ಮಾಡಿದ್ದಾರೆ.
ಸರಳವಾಗಿ ಹೇಳಬೇಕೆಂದರೆ, ಕಲೆ, ಸಂಗೀತ, ವಿಡಿಯೋಗಳು ಮತ್ತು ಫೋಟೋಗಳು ಸೇರಿದಂತೆ ಅನೇಕ ವಿಷಯಗಳ ಸಂಗ್ರಹವಿರುವ ಡಿಜಿಟಲ್ ಗುಚ್ಛಗಳು ಈ ಎನ್.ಎಫ್.ಟಿ.ಗಳು. ಇವುಗಳ ಮಾರಾಟ ಹಾಗೂ ಖರೀದಿಯನ್ನು ಸಾಮಾನ್ಯವಾಗಿ ಕ್ರಿಪ್ಟೋಕರೆನ್ಸಿಯಲ್ಲಿ ಮಾಡಲಾಗುತ್ತದೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹೊಸ ನಿಯಮಾವಳಿ, ಪಿ.ಹೆಚ್.ಡಿ. ಕಡ್ಡಾಯವಲ್ಲ ಎಂದ ಯುಜಿಸಿ
BollyCoin.com ನಲ್ಲಿ ಖಾನ್‌ರ ಎನ್.ಎಫ್.ಟಿ.ಗಳು ಮಾರಾಟಕ್ಕೆ ಇರಲಿವೆ. ಎಥೆರಿಯಂ ಬ್ಲಾಕ್ ಚೇನ್ ನಲ್ಲಿ ಈ ಡಿಜಿಟಲ್ ಅಸೆಟ್‌ಗಳನ್ನು ಮಾರಲಾಗುತ್ತದೆ. ತಮ್ಮ ಮೆಚ್ಚಿನ ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಪ್ರೀತಿ ತೋರಲು ಅಭಿಮಾನಿಗಳಿಗೆ ಎನ್.ಎಫ್.ಟಿ. ಖರೀದಿ ಹೊಸ ಮಾರ್ಗವಾಗಿದೆ.
“ಎನ್.ಎಫ್.ಟಿ. ಕ್ಷೇತ್ರಕ್ಕೆ ಇದೀಗ ತಾನೇ ಕಾಲಿಟ್ಟಿರುವ ಸಲ್ಮಾನ್ ಖಾನ್ ಶೀಘ್ರವೇ ತಮ್ಮದೇ ಕ್ರಿಪ್ಟೋಕರೆನ್ಸಿ ಭಾಯಿಕಾಯಿನ್ ಬಿಡುಗಡೆ ಮಾಡಲಿದ್ದಾರೆ,” ಎಂದು ನೆಟ್ಟಿಗರೊಬ್ಬರು ಜೋಕ್ ಮಾಡಿದ್ದಾರೆ.
https://twitter.com/BeingSalmanKhan/status/1448181752455856130?ref_src=twsrc%5Etfw%7Ctwcamp%5Etweetembed%7Ctwterm%5E1448181752455856130%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fpersonal-finance%2Fsalman-khan-announces-his-nft-collection-twitter-reacts-to-possibility-of-bhaicoin-2402309.html