ದಯೆಯು ಒಂದು ಅಸಾಮಾನ್ಯ ಸದ್ಗುಣವಾಗಿದೆ. ಅಂಥದ್ದೇ ಒಂದು ದಯಾಗುಣದ ವಿಡಿಯೋ ಈಗ ವೈರಲ್ ಆಗಿದೆ. ಇದು ಅತ್ಯಂತ ಹೃದಯಸ್ಪರ್ಶಿ ವಿಡಿಯೋ ಆಗಿದೆ.
ನಿರ್ಗತಿಕ ಮಕ್ಕಳು ಅಂಗಡಿಯೊಳಗೆ ಇರುವ ಟಿ.ವಿ.ಯನ್ನು ಕುತೂಹಲದಿಂದ ನೋಡಿದಾಗ ಅಂಗಡಿಯಾತ ಅವರಿಗಾಗಿ ವಿವಿಧ ಚಾನೆಲ್ ಬದಲಾಯಿಸಿ ತೋರಿಸುವ ವಿಡಿಯೋ ಇದಾಗಿದೆ.
ಗೌತಮ್ ತ್ರಿವೇದಿ ಎಂಬ ಬಳಕೆದಾರರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 18-ಸೆಕೆಂಡ್ ಕ್ಲಿಪ್‌ನಲ್ಲಿ, ಅಂಗಡಿಯೊಳಗೆ ಇರುವ ಟಿವಿಯಲ್ಲಿ ಸೇಲ್ಸ್‌ಮ್ಯಾನ್ ಚಾನೆಲ್‌ಗಳನ್ನು ಬದಲಾಯಿಸುವುದನ್ನು ಕಾಣಬಹುದು.
ಇಬ್ಬರು nirfgtik ಮಕ್ಕಳು ಸಹ ಅಲ್ಲಿ ಹಾಜರಿದ್ದರು.ಅವರು ಕುತೂಹಲದಿಂದ ಟಿವಿ ನೋಡುತ್ತಿದ್ದರು. ಅವರಿಗೆ ಟಿ.ವಿ. ಎಂದರೇನು ಎಂದು ತಿಳಿದಿಲ್ಲ. ಆಗ ಅಂಗಡಿಯಾತ ಬೇರೆ ಬೇರೆ ಚಾನೆಲ್‌ಗಳನ್ನು ಬದಲಿಸಿ ಅವರಿಗೆ ಅದನ್ನು ತೋರಿಸುವ ವಿಡಿಯೋ ಇದಾಗಿದೆ.
ಪ್ರತಿ ಸಂಜೆಯೂ ಈ ಅಂಗಡಿಯವ ಹೀಗೆಯೇ ಮಾಡುತ್ತಾರೆ ಎಂದು ಶೀರ್ಷಿಕೆ ನೀಡಲಾಗಿದ್ದು, ಜನರು ಅಂಗಡಿಯವನನ್ನು ತುಂಬು ಹೃದಯದಿಂದ ಹಾರೈಸುತ್ತಿದ್ದಾರೆ.