alex Certify ಹರಾಜಿಗಿದೆ ವಿಶ್ವವಿಖ್ಯಾತ ಮೊನಾಲಿಸಾ ಪೇಂಟಿಂಗ್‌ ತದ್ರೂಪು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿಗಿದೆ ವಿಶ್ವವಿಖ್ಯಾತ ಮೊನಾಲಿಸಾ ಪೇಂಟಿಂಗ್‌ ತದ್ರೂಪು…!

1960ರ ದಶಕದ ಈ ಪೇಂಟಿಂಗ್‌ ವರ್ಕ್‌ ಅನ್ನು ’ಮೊನಾಲಿಸಾ ಹೆಕ್ಕಿಂಗ್’ ಎಂದು ಕರೆಯಲಾಗುತ್ತಿದೆ. ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಮ್‌ನಲ್ಲಿರುವ ಅಸಲಿ ಮೊನಾಲಿಸಾ ಚಿತ್ರದ ಅಸಲಿಯತ್ತನೇ ಪ್ರಶ್ನಿಸಿದ್ದ ದಕ್ಷಿಣ ಫ್ರಾನ್ಸ್‌ನ ಕಲಾಕಾರ ರೇಮಂಡ್ ಹೆಕ್ಕಿಂಗ್‌ರ ಗೌರವಾರ್ಥ ಈ ಪೇಂಟಿಂಗ್‌ಗೆ ಹೆಸರಿಡಲಾಗಿದೆ. ತಮ್ಮ ಬಳಿ ಇರುವ ಕಲಾಚಿತ್ರವೇ ಅಸಲಿ ಮೊನಾಲಿಸಾ ಪೇಂಟಿಂಗ್ ಎಂದು ಹೆಕ್ಕಿಂಗ್ ಬಲವಾಗಿ ವಾದಿಸುತ್ತಲೇ ಇದ್ದಾರೆ.

ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ: ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ

ಅಸಲಿಗೆ ಮೊನಾಲಿಸಾದ ನಿಜವಾದ ಪೇಂಟಿಂಗ್‌ ಅನ್ನು ಲೌವ್ರೆ ಮ್ಯೂಸಿಯಂನಲ್ಲಿ 1911ರಲ್ಲಿ ಇಟಲಿಯ ವಿನ್ಸೆಂಝೋ ಪೆರುಗಿಯಾ ಎಂಬಾತ ಕದ್ದು ಮೂರು ವರ್ಷಗಳ ಬಳಿಕ ಹಿಂದಿರುಗಿಸಿದ್ದ.

ಬಹುಮುಖ್ಯ ಮಾಹಿತಿ: ಆದಾಯ ತೆರಿಗೆ ಹೊಸ ಪೋರ್ಟಲ್ ನಲ್ಲಿ ಶೀಘ್ರವೇ ಮಾಡಿ ಈ ಕೆಲಸ

ಹೀಗೆ ಮರಳಿಸಿದ್ದ ಕ್ಯಾನ್ವಾಸ್ ನಿಜವಾದದ್ದಲ್ಲ ಎಂದು ಹೆಕ್ಕಿಂಗ್ ವಾದಿಸುತ್ತಾ ಬಂದಿದ್ದರು.

1977ರಲ್ಲಿ ಹೆಕ್ಕಿಂಗ್ ನಿಧನರಾದ ಬಳಿಕ ಈ ಕ್ಯಾನ್ವಾಸ್ ತದ್ರೂಪನ್ನು ಅವರ ಕುಟುಂಬಸ್ಥರಿಗೆ ವರ್ಗಾಯಿಸಲಾಗಿದ್ದು, ಅವರೀಗ ಇದನ್ನು ಹರಾಜಿಗೆ ಇಡಲು ಬಯಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...