ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತೊರ್ನಹಳ್ಳಿ ಗ್ರಾಮದಲ್ಲಿ ದಾಖಲೆಯ 10 ಲಕ್ಷ ರೂಪಾಯಿಗೆ ಹಳ್ಳಿಕಾರ್ ತಳಿಯ ಜೋಡೆತ್ತುಗಳು ಮಾರಾಟವಾಗಿವೆ.
ತೊರ್ನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ರೈತ ವೆಂಕಟರೆಡ್ಡಿ ಅವರ ಹಳ್ಳಿಕಾರ್ ತಳಿ ಎತ್ತುಗಳು 10 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಅವರು 10 ಜೊತೆ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದು, ಆರು ಜೊತೆ ಎತ್ತುಗಳು 6 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಿವೆ. ಒಂದು ಜೊತೆ ಎತ್ತುಗಳು ದಾಖಲೆಯ 10 ಲಕ್ಷ ರೂ.ಗೆ ಮಾರಾಟವಾಗಿವೆ ಎನ್ನಲಾಗಿದೆ.