alex Certify ಯುಗಾದಿ ಹೊತ್ತಲ್ಲೇ ಮುಷ್ಕರ ಕೈಗೊಂಡ ನೌಕರರಿಗೆ ಬಿಗ್ ಶಾಕ್: ವೇತನ ನೀಡಲ್ಲ ಎಂದ್ರು ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಗಾದಿ ಹೊತ್ತಲ್ಲೇ ಮುಷ್ಕರ ಕೈಗೊಂಡ ನೌಕರರಿಗೆ ಬಿಗ್ ಶಾಕ್: ವೇತನ ನೀಡಲ್ಲ ಎಂದ್ರು ಸಿಎಂ

ರಾಯಚೂರು: ಸಾರಿಗೆ ನೌಕರರ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸಕ್ಕೆ ಗೈರು ಹಾಜರಾದ ನೌಕರರಿಗೆ ವೇತನ ನೀಡುವುದಿಲ್ಲ. ಕೆಲಸಕ್ಕೆ ಗೈರು ಹಾಜರಾದ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಮುಷ್ಕರ ಹೇಗೆ ನಿಭಾಯಿಸಬೇಕು ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಮುಷ್ಕರ ನಿರತ ಸಾರಿಗೆ ನೌಕರರ ವೇತನ ತಡೆಹಿಡಿಯಲಾಗಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನೌಕರರಿಗೆ ವೇತನವಿಲ್ಲದಂತಾಗಿದೆ. ವೇತನ ಹೆಚ್ಚಳಕ್ಕಾಗಿ ಹೋರಾಟ ಮುಂದುವರೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...