ನವದೆಹಲಿ: ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಅಧಿಸೂಚನೆ ಪ್ರಕಟಿಸಿದೆ.
ಡಿಸೆಂಬರ್ 16 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ ನಲ್ಲಿ ವೈಯಕ್ತಿಕ ವಿವರ ದಾಖಲಿಸುವ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಶೀಟ್ ಆಧಾರಿತ ಪರೀಕ್ಷೆ ಮಾದರಿಯಾಗಿದೆ.
ಜನವರಿ 21, 2024ರಲ್ಲಿ 186 ನಗರಗಳಲ್ಲಿ ಪರೀಕ್ಷೆ ನಡೆಸಲಾಗುವುದು. 6ನೇ ತರಗತಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ದಿನಾಂಕ 31.03.2024ಕ್ಕೆ 10 ರಿಂದ 12 ವರ್ಷದೊಳಗಿನವರಾಗಿರಬೇಕು.
9ನೇ ತರಗತಿಗೆ ಅರ್ಹತೆ ಹೊಂದಲು ವಿದ್ಯಾರ್ಥಿಗಳು 13 ರಿಂದ 15 ವರ್ಷದೊಳಗಿನವರಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 500 ರೂಪಾಯಿ, ಸಾಮಾನ್ಯ ಮತ್ತು ಓಬಿಸಿ ವರ್ಗದ ವಿದ್ಯಾರ್ಥಿಗಳಿಗೆ 650 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಬಾಲಕರು ಮತ್ತು ಬಾಲಕಿಯರಿಗೆ ಪ್ರವೇಶ ಅರ್ಹತೆ ಒಂದೇ ರೀತಿ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ www.nta.ac.in/ ವೆಬ್ಸೈಟ್ ಗಮನಿಸಬಹುದಾಗಿದೆ.