ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾಲ ಕೂಡಿಬಂದಿದೆ. ನವೆಂಬರ್ 11, 12 ಮತ್ತು 13ರಂದು ಸಮ್ಮೇಳನ ನಡೆಸುವ ಸಾಧ್ಯತೆ ಇದೆ.
ಎರಡು ವರ್ಷಗಳ ಹಿಂದೆಯೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೋನಾ ಸೇರಿ ನಾನಾ ಕಾರಣದಿಂದಾಗಿ ಸಮ್ಮೇಳನ ಮುಂದೂಡಲಾಗಿತ್ತು. ಕನ್ನಡ ರಾಕ್ಯೋತ್ಸವದ ತಿಂಗಳಾಗಿರುವ ನವೆಂಬರ್ 11 ರಂದು ಕನಕ ಜಯಂತಿ, 12 ರಂದು ಎರಡನೇ ಶನಿವಾರ ಹಾಗೂ 13ರಂದು ಭಾನುವಾರ ರಜೆ ದಿನ ಇರುವುದರಿಂದ ಹೆಚ್ಚಿನ ಸಂಖ್ಯೆಯ ನೌಕರರು ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಕಾರಣಕ್ಕೆ ನವೆಂಬರ್ 11 ರಿಂದ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗದಿಪಡಿಸಿದ್ದು, ಸರ್ಕಾರದಿಂದ ಸಮ್ಮೇಳನದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಹೇಳಲಾಗಿದೆ.