ದೆಹಲಿ ಡಾಬಾದ ರೆಫ್ರಿಜರೇಟರ್ ನಲ್ಲಿ ಯುವತಿ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಪೋಟಕ ಸಂಗತಿ ಬಯಲಾಗಿದೆ. ನಿಕ್ಕಿ ಯಾದವ್ ಜೊತೆ ಸಾಹಿಲ್ ಗೆಹ್ಲೋಟ್ 2020ರಲ್ಲಿ ನೋಯ್ಡಾದ ಆರ್ಯ ಸಮಾಜದಲ್ಲಿ ವಿವಾಹವಾಗಿರುವುದು ಈಗ ಬಹಿರಂಗವಾಗಿದ್ದು, ಪೊಲೀಸರು ಇವರಿಬ್ಬರ ಮದುವೆ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.
ನಿಕ್ಕಿ ಯಾದವ್ ಗಳನ್ನು ಪ್ರೀತಿಸುತ್ತಿದ್ದ ಸಾಹಿಲ್ ಗೆಹ್ಲೋಟ್ ಆಕೆಯ ಜೊತೆ ಲಿವ್ ಇನ್ ಸಂಬಂಧದಲ್ಲಿ ಇದ್ದಾನೆಂದೇ ಈವರೆಗೆ ಭಾವಿಸಲಾಗಿತ್ತು. ಆದರೆ ಇವರಿಬ್ಬರೂ 2020 ರಲ್ಲಿಯೇ ಮದುವೆಯಾಗಿದ್ದು, ಈ ಮದುವೆ ಸಾಹಿಲ್ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.
ಹೀಗಾಗಿ ಸಾಹಿಲ್ ಕುಟುಂಬ ಮತ್ತೊಬ್ಬ ಯುವತಿ ಜೊತೆ ಆತನ ಮದುವೆ ನಿಶ್ಚಯ ಮಾಡಿದ್ದು, ಆದರೆ ಈ ವಿಷಯ ಅರಿತ ನಿಕ್ಕಿ ಯಾದವ್ ಗಲಾಟೆ ತೆಗೆದಿದ್ದಳು. ಈಕೆ ಬದುಕಿದ್ದರೆ ತಾನು ಮದುವೆಯಾಗುವುದು ಕಷ್ಟ ಎಂಬ ಕಾರಣಕ್ಕೆ ಸಾಹಿಲ್ ಆಕೆಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.