alex Certify ಕುಂಕುಮ ಹೂವಿನಿಂದ ದೇಹಕ್ಕೆ ಸಿಗುತ್ತೆ ದೃಢತ್ವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಂಕುಮ ಹೂವಿನಿಂದ ದೇಹಕ್ಕೆ ಸಿಗುತ್ತೆ ದೃಢತ್ವ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ ಕುಂಕುಮ ಹೂವಿನಿಂದ ಆಗುವ ಪ್ರಯೋಜನಗಳೇನು…?

* ಜೀರ್ಣಶಕ್ತಿಯನ್ನು ವೃದ್ಧಿ ಮಾಡುತ್ತದೆ. ಆಹಾರವನ್ನು ತೆಗೆದುಕೊಳ್ಳಬೇಕು ಎಂಬ ಕೋರಿಕೆಯನ್ನು ಹೆಚ್ಚಿಸುತ್ತದೆ. ದೇಹದ ಎಲ್ಲಾ ಭಾಗಗಳಿಗೆ ರಕ್ತ ಪರಿಚಲನೆ ಆಗುವಂತೆ ಮಾಡುತ್ತದೆ. ಅದಕ್ಕೆ ಇದನ್ನು ಲಿವರ್, ಮೂತ್ರಪಿಂಡ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ.

* ಕುಂಕುಮ ಹೂವು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು, ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹೃದ್ರೋಗ ಇರುವವರು ನಿತ್ಯವೂ ಎರಡು ಮೂರು ಎಸಳು ನೀರಲ್ಲಾಗಲಿ, ಹಾಲಲ್ಲಾಗಲಿ ನೆನೆಸಿಟ್ಟು ಸೇವಿಸುವುದು ಒಳ್ಳೆಯದು.

* ಚರ್ಮವನ್ನು ಕಾಂತಿಯುತವಾಗಿ ಮಾಡುವ ಗುಣ ಹೊಂದಿದೆ. ಆದ್ದರಿಂದ ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಕುಂಕುಮ ಹೂವನ್ನು ಬಳಸಲಾಗುತ್ತದೆ. ಒಂದು ಟೀ ಸ್ಪೂನ್ ಹಾಲಿಗೆ ಒಂದು ಎಸಳು ಕುಂಕುಮ ಹೂ ನೆನೆಸಿಟ್ಟು ಆ ಮಿಶ್ರಣವನ್ನು ಮುಖಕ್ಕೆ ಹಚ್ಚುತ್ತಿದ್ದರೆ, ಮುಖದ ಮೇಲಿನ ಮಚ್ಚೆಗಳು ತೊಲಗುತ್ತವೆ.

* ಗರ್ಭಿಣಿಯರು ಕುಂಕುಮ ಹೂ ಬೆರೆಸಿದ ಹಾಲನ್ನು ಕುಡಿಯುತ್ತಿದ್ದರೆ ಜೀವ ಕ್ರಿಯೆಗಳಿಗೆ ತಕ್ಕದಾದ ಉಷ್ಣ ಶಕ್ತಿ ಉತ್ಪತ್ತಿಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...